ಹಾಸನ: ನೀಟ್ ಪರೀಕ್ಷೆಯಲ್ಲಿ ಹಾಸನ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದ ಮಾಸ್ಟರ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಸೃಷ್ಠಿ ಲೋಕೇಶ್ ಅವರನ್ನು ಕಾಲೇಜಿನ ವಿದ್ಯಾರ್ಥಿಗಳ ಎದುರು ಸನ್ಮಾನಿಸಿ ಗೌರವಿಸಿದಲ್ಲದೇ ಮಂದಿನ ಶಿಕ್ಷಣಕ್ಕೆ ಪ್ರೋತ್ಸಹಿಸುವ ನಿಟ್ಟಿನಲ್ಲಿ 50 ಸಾವಿರ ರೂಗಳ ನಗದನ್ನು ಬಹುಮಾನವಾಗಿ ನೀಡಿದರು.
ನಂತರ ಮಾಸ್ಟರ್ ಪಿಯು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಟಿ.ಎ.ಹೆಚ್. ರಾಯುಡು ಮಾತನಾಡಿ, ನಡೆದ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯದಲ್ಲಿ ಮೂರನೇ ರ್ಯಾಂಕ್ ಬಂದಿದ್ದು, ಸಿಇಟಿ ಮತ್ತು ಜೆಇಇ ಯಲ್ಲಿ ಪರೀಕ್ಷೆಯಲ್ಲಿಯೂ ಕೂಡ ಸಾಧನೆ ಮಾಡಲಾಗಿದ್ದು, ಈಗ ನೀಟ್ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ ಸೃಷ್ಠಿ ಲೋಕೇಶ್ ಅವರು ಭೌತಶಾಸ್ತç, ರಸಾಯನ ಶಾಸ್ತ್ರ, ಜೀವಶಾಸ್ತ್ರ, ಸೇರಿ 99.953 ಪರ್ಸೇಂಟ್ 720 606 ಅಂಕ ಪಡೆಯುವ ಮೂಲಕ ಹಾಸನ ಜಿಲ್ಲೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ ಎಂದರು.
ಸೃಷ್ಠಿ ಲೋಕೇಶ್ ಅವರು ವಿದ್ಯಾಭ್ಯಾದಲ್ಲಿ ಎಂದು ಕೊರತೆಯಾಗಾದಾಗೆ ಒಂದು ದಿನ ಕಾಲೇಜಿನ ತರಗತಿಗೆ ತಪ್ಪಿಸದೇ ಹಾಜರಾತಿ ಆಗಿದ್ದಾರೆ ಎಂದರು. ಈ ವಿದ್ಯಾರ್ಥಿನಿ ಕಾಲೇಜಿನ ತರಗತಿ ಬಿಟ್ಟರೇ ಹೊರಗೆ ಎಲ್ಲೂ ಕೂಡ ಇತರೆ ಟ್ಯೂಷನ್ ಗೆ ಹೋಗಿರುವುದಿಲ್ಲ. ಉತ್ತಮ ಅಂಕ ಪಡೆದ ಸೃಷ್ಠಿ ಲೋಕೇಶ್ ಅವರಿಗೆ ಕಾಲೇಜಿನ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಜೊತೆಗೆ ಸೃಷ್ಠಿ ಅವರಿಗೆ ಮುಂದಿನ ಶಿಕ್ಷಣ ಉತ್ತಮವಾಗಿರಲಿ ಎಂದು ಪ್ರೋತ್ಸಹಿಸಲು 50 ಸಾವಿರ ನಗದು ಬಹುಮಾನವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ನೀಟ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಬಂದ ಮಾಸ್ಟರ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಸೃಷ್ಠಿ ಲೋಕೇಶ್ ಉದ್ದೇಶಿಸಿ ಮಾತನಾಡಿ, ಯಾರೆ ವಿದ್ಯಾರ್ಥಿಗಳಾಗಲಿ ಶಿಕ್ಷಣ ಪಡೆಯುವ ಕಡೆ ಹೆಚ್ಚು ಗಮನವಿರಬೇಕು. ನಿಮ್ಮ ತಪ್ಪುಗಳನ್ನ ಅರಿತು ಮುಂದೆ ನಡೆದರೇ ನನಗಿಂತ ಒಳ್ಳೆಯ ರ್ಯಾಂಕ್ ಪ್ರತಿಯೊಬ್ಬರಿಗೂ ಬರುತ್ತದೆ. ನಿಮ್ಮಲ್ಲಿ ಏನಾದರೂ ಸಮಸ್ಯೆ ಇದ್ದರೇ ಅದನ್ನು ಸರಿಪಡಿಸಿಕೊಳ್ಳುವುದನ್ನು ತಿಳಿದುಕೊಳ್ಳಿ. ರ್ಯಾಂಕ್ ಬರಲಿಲ್ಲ ಎಂದು ನೊಂದುಕೊಳ್ಳುವುದನ್ನು ಬಿಟ್ಟು ಅದನ್ನ ಚಾಲೆಂಜ್ ಆಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು. ಎಲ್ಲೆ ಏನೆ ಬರಲಿ ಎದುರಿಸುವ ಛಲ ಬರಬೇಕು. ಯಾವಾಗಲು ಸಾಧಿಸುವ ಮನಸ್ಸು ಇದ್ದರೇ ಗೆಲುವು ನಿಮ್ಮದಾಗುತ್ತದೆ ಎಂದು ತಮ್ಮ ಅನಿಸಿಕೆ ಹೇಳಿಕೊಂಡರು.
ಇದೆ ಸಂದರ್ಭದಲ್ಲಿ ಮಾಸ್ಟರ್ ಪಿಯು ಕಾಲೇಜು ಕಾರ್ಯದರ್ಶಿ ಗೌಡೇಗೌಡ, ಬಿ.ಎಸ್. ಮಂಜುನಾಥ್, ಉಪಾಧ್ಯಕ್ಷೆ ಹೆಚ್.ಸಿ. ನಂದಿನಿ ಇತರರು ಉಪಸ್ಥಿತರಿದ್ದರು.
