ಹಾಸನ: ನೀಟ್ ಪರೀಕ್ಷೆಯಲ್ಲಿ ಮಾಸ್ಟರ್ ಕಾಲೇಜು ವಿದ್ಯಾರ್ಥಿನಿ-ಸೃಷ್ಠಿ ಲೋಕೇಶ್ ಜಿಲ್ಲೆಗೆ ಪ್ರಥಮ- ಸನ್ಮಾನಿಸಿ ಗೌರವ

ಹಾಸನ ಜಿಲ್ಲೆಯ ಮಾಸ್ಟರ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೃಷ್ಠಿ ಲೋಕೇಶ್, ನೀಟ್ ಪರೀಕ್ಷೆಯಲ್ಲಿ 606 ಅಂಕ (99.953%) ಪಡೆದು ಜಿಲ್ಲೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಸಿಇಟಿ, ಜೆಇಇ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಗಳಲ್ಲಿ ಕೂಡ ಶ್ರೇಷ್ಠ ಸಾಧನೆಗೈದ ಸೃಷ್ಠಿ, ನಿತ್ಯ ತರಗತಿಗೆ ಹಾಜರಾಗುತ್ತಾ ಸ್ವದಯನದಿಂದಲೇ ಉನ್ನತ ಮಟ್ಟದ ಅಂಕ ಗಳಿಸಿದ್ದಾರೆ. ಈ ಸಾಧನೆಗಾಗಿ ಕಾಲೇಜು ವತಿಯಿಂದ ₹50,000 ನಗದ ಬಹುಮಾನ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಉದ್ದೇಶಿಸಿ ಮಾತನಾಡಿದ ಅವರು, ತಪ್ಪುಗಳನ್ನು ಗುರುತುಮಾಡಿ ಸುಧಾರಿಸಿಕೊಂಡು ಮುಂದುವರಿಯುವ ಛಲವೇ ಯಶಸ್ಸಿಗೆ ಕೀಲಿಕೈ ಎಂದು ಹೇಳಿದ್ದಾರೆ.