ನವದೆಹಲಿ, ಜುಲೈ 11: ರಾಜ್ಯದಲ್ಲಿ, ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ಏರುತ್ತಿರುವ ಹಠಾತ್ ಹೃದಯಾಘಾತಗಳ ಪ್ರಕರಣಗಳ ಕುರಿತಂತೆ ತೀವ್ರ ಆತಂಕ ವ್ಯಕ್ತಪಡಿಸಿದ ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್, ಈ ಬಗ್ಗೆ ತ್ವರಿತ ಕ್ರಮಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರಿಗೆ ಮನವಿ ಸಲ್ಲಿಸಿದರು.
ಸಂಸದರು ನೀಡಿದ ಮಾಹಿತಿಯ ಪ್ರಕಾರ, ಕಳೆದ 2 ವರ್ಷಗಳಲ್ಲಿ ಹಾಸನ ಜಿಲ್ಲೆಯಲ್ಲಿ ಒಟ್ಟು 507 ಹೃದಯಾಘಾತ ಪ್ರಕರಣಗಳು ದಾಖಲಾಗಿದ್ದು, ಅವರಲ್ಲಿ 140 ಮಂದಿ ಜೀವಹಾನಿಗೊಳಗಾಗಿದ್ದಾರೆ. ಆತಂಕಕರ ವಿಷಯವೆಂದರೆ, ಈ ಮೃತರ ಪೈಕಿ ಶೇ. 35ರಷ್ಟು ಮಂದಿ 40 ವರ್ಷದೊಳಗಿನವರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೈಗೊಳ್ಳಬೇಕಾದ ಕ್ರಮಗಳು:
ಈ ಬೆಳವಣಿಗೆಗೆ ತಡೆ ನೀಡಲು, ಸಂಸದ ಶ್ರೇಯಸ್ ಪಟೇಲ್ ಸರ್ಕಾರದ ಗಮನಕ್ಕೆ ತರಿದ ಪ್ರಮುಖ ಸಲಹೆಗಳು:
- 15 ರಿಂದ 40 ವರ್ಷದೊಳಗಿನವರಿಗೆ ಕಡ್ಡಾಯ ಹೃದಯ ತಪಾಸಣೆ ವ್ಯವಸ್ಥೆ ಮಾಡುವುದು
- ಹಠಾತ್ ಹೃದಯ ನಿಲುಗಡೆ (Sudden Cardiac Arrest) ಪ್ರಕರಣಗಳ ಡಿಜಿಟಲ್ ದಾಖಲೆಪಡೆ ವ್ಯವಸ್ಥೆ ರೂಪಿಸುವುದು
- ಸಂಚಾರಿ ತಪಾಸಣಾ ವಾಹನಗಳು (Mobile Screening Units) ಪ್ರಾರಂಭಿಸುವುದು
- ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಯಿಂದ ವಿಶೇಷ ಅಧ್ಯಯನ ನಡೆಸಿಸುವುದು
ಸಂಸದರು, ಈ ಕಾಯಿಲೆಯ ಪ್ರವೃತ್ತಿ ಯುವ ಜನತೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ತ್ವರಿತ ಬದಲಾವಣೆ ಮತ್ತು ಮುನ್ನೆಚ್ಚರಿಕಾ ತಪಾಸಣಾ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.

[…] […]