ಹಾಸನ: ಕೆಳ್ಳಹಳ್ಳಿ ದಲಿತ ಮಹಿಳೆ ಶಾರದಾ ಕೊಲೆ: ಆರೋಪಿಗೆ ಬಂಧನ, ಸಿಐಡಿ ತನಿಖೆಗೆ ಒತ್ತಾಯ

ಹಾಸನ ಜಿಲ್ಲೆಯ ಕೆಳ್ಳಹಳ್ಳಿ ಗ್ರಾಮದಲ್ಲಿ ದಲಿತ ಮಹಿಳೆ ಶಾರದಾ ಕೊಲೆ ಪ್ರಕರಣದ ಕುರಿತು ಆರೋಪಿಯನ್ನು ಬಂಧಿಸಿ, ಪರಿಶಿಷ್ಟರ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಿಐಡಿ ತನಿಖೆ ನಡೆಸಬೇಕು ಎಂದು ದಲಿತ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿವೆ.