ಹಾಸನ: ಜು.11 ರಂದು ‘ಮಾಯಾಮೃಗ’ ಮತ್ತು ‘ಎದೆಯ ಹಣತೆ’ ನಾಟಕಗಳ ಪ್ರದರ್ಶನ

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜುಲೈ 11ರಂದು ರಂಗಸಿರಿ ಆಶ್ರಯದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಮಾಯಾಮೃಗ ಹಾಗೂ ಬಾನು ಮುಷ್ತಾಕ್ ಅವರ ಬೂಕರ್ ಪ್ರಶಸ್ತಿ ವಿಜೇತ ಎದೆಯ ಹಣತೆ ಕೃತಿಗಳ ಆಧಾರಿತ ನಾಟಕಗಳ ಪ್ರದರ್ಶನ ನಡೆಯಲಿದೆ. ಮಾಯಾಮೃಗ ನಾಟಕವನ್ನು ರಂಜಿತ್ ಶೆಟ್ಟಿ ನಿರ್ದೇಶನಿಸಿದ್ದು, ಎದೆಯ ಹಣತೆ ನಾಟಕವನ್ನು ಡಾ. ಎಂ. ಗಣೇಶ್ ಹೆಗ್ಗೋಡು ನಿರ್ದೇಶಿಸಿದ್ದಾರೆ. ಕಾರ್ಯಕ್ರಮವನ್ನು ಡಿಸಿ ಲತಾ ಕುಮಾರಿ ಉದ್ಘಾಟಿಸಲಿದ್ದು, ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ರೆಡ್‌ಕ್ರಾಸ್ ಜಿಲ್ಲಾ ಅಧ್ಯಕ್ಷ ಹೆಮ್ಮಿಗೆ ಮೋಹನ್ ಉಪಸ್ಥಿತರಿರುವರು. ಸಂಜೆ 5 ಗಂಟೆಗೆ ಆರಂಭವಾಗುವ ನಾಟಕ ಪ್ರದರ್ಶನಕ್ಕೆ ಉಚಿತ ಪ್ರವೇಶ ವ್ಯವಸ್ಥೆ ಇದೆ.