ಹಾಸನ: ವಿಐಪಿ -ಶಿಷ್ಟಾಚಾರ ದರ್ಶನ ಎರಡು ದಿನಕ್ಕೆ ಮಾತ್ರ ಸೀಮಿತಗೊಳಿಸಬೇಕು ಹಾಗೂ ಭಕ್ತರಿಗೆ ಯಾವುದೇ ಅನಾನುಕೂಲ ಆಗದಂತೆ ಸುಗಮ ದರ್ಶನ ಸಿಗುವಂತಾಗಲು ಕ್ರಮವಹಿಸಬೇಕು ಎಂದು ಹಾಸನಾಂಬ ಜಾತ್ರಾ ಹಿತ ರಕ್ಷಣಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕೆಎಸ್.ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಸಮಿತಿ ಅಧ್ಯಕ್ಷ ಡಾ. ಎನ್. ರಮೇಶ್ ಮಾತನಾಡಿ, ವಿ ಐ ಪಿ ಸಂಸ್ಕೃತಿಯ ಪರಿಣಾಮ ಶ್ರೀ ಹಾಸನಾಂಬ ದರ್ಶನದಲ್ಲಿ ಭಕ್ತಾದಿಗಳಿಗೆ ತೀವ್ರವಾದ ಸಮಸ್ಯೆ ಉಂಟಾಗುತ್ತಿರುವುದು ಹಲವು ವರ್ಷದಿಂದ ಜಗಜ್ಜಾಹಿರಾಗಿದೆ ವಿಐಪಿ ಸಂಸ್ಕೃತಿಯ ಪರಿಣಾಮ ಗರ್ಭಗುಡಿಗೆ ಭಕ್ತರಿಗೆ ಪ್ರವೇಶವಿದ್ದಿದ್ದು, ದೇವಾಲಯದ ಗರ್ಭಗುಡಿ ಪ್ರವೇಶ ಕೇವಲ ವಿಐಪಿ ಗಳಿಗೆ ಮಾತ್ರ ಸೀಮಿತವಾಗಿದೆ.
ಭಕ್ತಾದಿಗಳು ದೇವಾಲಯದ ಗರ್ಭಗುಡಿಯ ಹೊರಗೆ ನಿಂತೇ ದರ್ಶನ ಮಾಡುತ್ತಾರೆ. ಅದೇ ರೀತಿ ಶ್ರೀ ಸಿದ್ದೇಶ್ವರ ದೇವಾಲಯದ ನವರಂಗಕ್ಕೂ ಕೂಡ ಪ್ರವೇಶವನ್ನು ನಿಷೇಧಿಸಿ ಬಾಗಿಲ ಮೂಲಕವೇ ದೇವರ ದರ್ಶನವನ್ನು ಮಾಡಿಸುವ ಪರಿಪಾಠ ಆರಂಭವಾಗಿದೆ. ವಿಐಪಿ ಗಳು ಮತ್ತು ಅವರ ಜೊತೆ ಬರುವ ಹಿಂಬಾಲಕರಿಂದ ಕನಿಷ್ಠ 30 ರಿಂದ 45 ನಿಮಿಷಗಳ ದೇವಿಯ ದರ್ಶನ ಕಾರಣ ಸಾಮಾನ್ಯ ಜನರಿಕೆ ದರ್ಶನವನ್ನು ಮೂಟಕು ಗೊಳಿಸುವುದು ಸಾಮಾನ್ಯವಾಗಿದೆ ಎಂದು ದೂರಿದರು.
ಕಳೆದ ವರ್ಷವಂತು ದೇವಿಯ ದರ್ಶನ ಅವಧಿ ಎಂಟರಿಂದ ಹತ್ತು ಗಂಟೆವರೆಗೂ ತಗುಲಿತ್ತು. ಎಲ್ಲಾ ದಿನಗಳು ಕೂಡ ವಿಐಪಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಇದರಿಂದ ಪ್ರತಿ ದಿನ ವಿಐಪಿ ಗಳು ಅವರ ಜೊತೆ ಬರುವ ಹಿಂಬಾಲಕರು ಗರ್ಭಗುಡಿಗೆ ನೇರ ಪ್ರವೇಶ ಮಾಡಿ ಭಕ್ತಾದಿಗಳನ್ನು ಕಾಯಿಸುವುದರಿಂದ ರೋಸಿ ಹೋಗಿರುವ ಭಕ್ತಾದಿಗಳಿಗೆ ತೀವ್ರವಾದ ಸಮಸ್ಯೆ ಉಂಟಾಗುವುದು. ವಿ ಐ ಪಿ ಗಳ ಹಾವಳಿ ವಿಪರೀತವಾಗಿ ಅನೇಕ ಭಕ್ತರು ಶ್ರೀ ಹಾಸನಾಂಬೆ ದೇವಾಲಯ ದರ್ಶನ ಮಾಡುವುದನ್ನೇ ನಿಲ್ಲಿಸಿದ್ದಾರೆ ಎಂಬ ವಿಚಾರ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇವೆ ಎಂದರು.
ದೇವಿಯ ಫೋಟೋವನ್ನು ಪ್ಲೆಕ್ಸ್ ಗಳಲ್ಲಿ ಪತ್ರಿಕೆಗಳಲ್ಲಿ ಟಿವಿ ಗಳಲ್ಲಿ ಹಾಕುವುದು ಇನ್ನು ಮುಂದಾದರೂ ನಿಲ್ಲಲಿ. ಸರ್ಕಾರಗಳು ದೇವಿಯ ಫೋಟೋವನ್ನು ತೆಗೆಯಬಾರದೆಂದು ಸೂಚನಾ ಫಲಕಗಳನ್ನು ಜಾತ್ರಾ ಮಹೋತ್ಸವ ಪ್ರಕಟಣೆಗಳಲ್ಲಿ ತಿಳಿಸಲು ಮನವಿ. ವಿ ಐ ಪಿ ಪಾಸುಗಳ ವಿತರಣೆ ನಿಷೇಧಿಸಿದ ಜಿಲ್ಲಾ ಆಡಳಿತದ ಕ್ರಮ ಸ್ವಾಗತಾರ್ಹ. ಜಾತ್ರಾ ಸಮಯದಲ್ಲಿ ಒತ್ತಡಗಳಿಗೆ ಮಣಿದು ವಿಐಪಿ ಪಾಸ್ ಪುನರ್ ಪ್ರಾರಂಭಮಾಡಬಾರದೆಂದು ವಿನಂತಿಸುತ್ತೇವೆ ಎಂದರು.
ಶ್ರೀ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ, ಸರದಿ ಸಾಲಿನಲ್ಲಿ ನಿಂತವರಿಗೆ ಹಣೆಯಲ್ಲಿ ಕುಂಕುಮ ಇಡಲು ಕುಂಕುಮವನ್ನು ಸರತಿ ಸಾಲಿನ ಬಳಿ ಇಡಲು ಹಾಗೂ ಭಕ್ತಾದಿಗಳಿಗೆ ದರ್ಶನದ ನಂತರ ಅರಿಶಿನ ಕುಂಕುಮ, ಹೂಗಳ ಪ್ರಸಾದ ವಿತರಿಸುವ ವ್ಯವಸ್ಥೆಯನ್ನು ಸಂಘ-ಸಂಸ್ಥೆಗಳಿಗೆ, ಸ್ವಯಂ ಸೇವಕರಿಗೆ ವಹಿಸಿ ಕೊಡಲು ಮನವಿ ಮಾಡಿದರು.
ಕಾರ್ಯದರ್ಶಿ ರಾಜ ವೆಂಕಟೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗೇಗೌಡ, ಶ್ರೀಧರ್, ಸತೀಶ್, ಉದಯ್ ಕುಮಾರ್ , ಸಾಯಿಪ್ರಸಾದ್ , ಅಶೋಕ್ ಕೋಶಿ, ರಾಧಾ ತಿವಾರಿ, ಚಂದ್ರುನಿಡಿಗೆರೆ, ಗಿರೀಶ್ ಬೈರಾಟೆ ಇತರರು ಇದ್ದರು.
