ಹಾಸನ ಮಳೆ ಆರ್ಭಟ: ಶಿರಾಡಿಘಾಟ್‌ ರಸ್ತೆಯಲ್ಲಿ ಭೂಕುಸಿತ, ಬೆಳೆ ಹಾನಿ, ಜನಜೀವನ ಅಸ್ತವ್ಯಸ್ತ

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಬೇಲೂರು, ಸಕಲೇಶಪುರದಲ್ಲಿ ವಿದ್ಯುತ್ ವ್ಯತ್ಯಯ, 60 ಎಕರೆ ಬೆಳೆ ಹಾನಿ, ರೈತರು ನಷ್ಟ ಅನುಭವಿಸುತ್ತಿರುವುದು ಜನಜೀವನವನ್ನು ತೀವ್ರವಾಗಿ ದುಸ್ತಿತಿಗೆ ತಳ್ಳಿದೆ.