ಹಾಸನ, ನವೆಂಬರ್ 10: ಹಾಸನ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಣಾ ಶಿಕ್ಷಕ ಶ್ರೀ ನಿರಂಜನ್ ರಾಜ್ ಅವರನ್ನು ಸನ್ಮಾನಿಸಿ ಅಭಿನಂದಿಸಿದೆ.
ಇದನ್ನು ಓದಿ: ಹಾಸನ: ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಜೆ.ಆರ್. ಕೆಂಚೇಗೌಡ ಅಧ್ಯಕ್ಷರಾಗಿ ಆಯ್ಕೆ
ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಕುಮಾರಸ್ವಾಮಿರಾಜು ಮತ್ತು ಪದಾಧಿಕಾರಿಗಳು ಮನೋಹರ್, ಭಾನುಪ್ರಕಾಶ್, ಬಾಬು, ಭರತ್, ಅಕ್ಷಯ್, ಸ್ಕಂದ ರಾಜು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಸನ್ಮಾನ ಕಾರ್ಯಕ್ರಮದಲ್ಲಿ ನಿರಂಜನ್ ರಾಜ್ ಅವರ ಸಾಧನೆಗಳನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಲಾಯಿತು ಮತ್ತು ಅವರ ಮುಂದಿನ ಕಾರ್ಯಕ್ಷೇತ್ರದಲ್ಲಿ ಯಶಸ್ಸಿನ ಶುಭಾಶಯ ತಿಳಿಸಲಾಯಿತು.
