ಹಾಸನ: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಇಂದು ಕಿರಣ್ ಪ್ರೌಢಶಾಲೆ, ಲಕ್ಷ್ಮಿಪುರಂ ಬಡಾವಣೆಯ ಆವರಣದಲ್ಲಿ ಟ್ರಾಕ್ ಸೂಟ್ ವಿತರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಭವ್ಯವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಕಿರಣ್ ವಿದ್ಯಾಟ್ರಸ್ಟ್ನ ಸಂಸ್ಥಾಪಕ ಶ್ರೀ ಕೈಲಾಸ್ ಶಂಕರ್ ಉದ್ಘಾಟಿಸಿದರು. ರೋಟರಿ ಕ್ಲಬ್ ಸನ್ ರೈಸ್ನ ಅಧ್ಯಕ್ಷ ಹೆಚ್.ಡಿ. ವಜ್ರಕುಮಾರ್ ಪ್ರಸ್ತಾವಿಕ ನುಡಿಗಳನ್ನು ನುಡಿದರು. ರೋಟರಿ ಜಿಲ್ಲೆ 3182ರ ವಲಯ-9ರ ಅಸಿಸ್ಟೆಂಟ್ ಗವರ್ನರ್ ಜೆ.ಎನ್. ಮಂಜುನಾಥ್ ಹಿತ ನುಡಿಗಳನ್ನು ನೀಡಿದರು.
ನಂತರ ಶಾಲೆಯ ವಿದ್ಯಾರ್ಥಿಗಳಿಗೆ ಗಣ್ಯರ ಸಮ್ಮುಖದಲ್ಲಿ ಉಚಿತವಾಗಿ ಟ್ರಾಕ್ ಸೂಟ್ಗಳನ್ನು ವಿತರಿಸಲಾಯಿತು. ಜೊತೆಗೆ ಶಾಲೆಯ 16 ಶಿಕ್ಷಕರಿಗೆ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕ್ಲಬ್ನ ಸಮಾಜಮುಖಿ ಚಟುವಟಿಕೆಗಳ ಕುರಿತು ಮಾತನಾಡಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿರಣ್ ವಿದ್ಯಾಟ್ರಸ್ಟ್ ಕಾರ್ಯದರ್ಶಿ ಶ್ರೀಮತಿ ಉಷಾದೇವಿ, ಕ್ಲಬ್ ಕಾರ್ಯದರ್ಶಿ ಕೆ.ಎಸ್. ಯೋಗೇಶ್, ಕ್ಲಬ್ ಸದಸ್ಯರಾದ ರೋ. ಎಂ.ಸಿ. ರಾಜು, ರೋ. ಸಿದ್ದನಂಜಪ್ಪ, ರೋ.ರಾಜೇಶ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.
ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ರೋಟರಿ ಕ್ಲಬ್ ತಂಡ ಧನ್ಯವಾದಗಳನ್ನು ತಿಳಿಸಿತು.