ಹಾಸನ: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಹಾಗೂ ಯೋಗ ಚೇತನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ “ವಿಶ್ವ ಯೋಗ ದಿನಾಚರಣೆ”

ಹಾಸನ ನಗರದ ಎಸ್.ಬಿ.ಎಂ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಾಸನ ಶಿಬಿರವನ್ನು ಆಯೋಜಿಸಲಾಯಿತು. ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಯೋಗ ಚೇತನಾ ಕೇಂದ್ರ ಅಡಗೂರು ಮತ್ತು ಶ್ರೀ ವರಸಿದ್ಧಿ ವಿನಾಯಕ ಯೋಗ ಸಭೆಯ ಸಹಯೋಗದಲ್ಲಿ ಆಯೋಜಿತ ಈ ಶಿಬಿರದಲ್ಲಿ 50 ಕ್ಕೂ ಹೆಚ್ಚು ಜನರು ಪಾಲ್ಗೊಂಡರು. ಯೋಗ ಗುರು ಚೇತನ್ ಗುರೂಜಿ ಯೋಗಾಸನಗಳ ಮಹತ್ವ, ಅನುಷ್ಠಾನದ ವಿಧಾನ ಕುರಿತು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರು ಮತ್ತು ಸ್ಥಳೀಯ ಯೋಗಾಧ್ಯಯನ ಆಸಕ್ತರು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.