ಹಾಸನ: ಸಂಜೀವಿನಿ ಬ್ಯಾಂಕ್ ನಿರ್ದೇಶಕರ ಅನರ್ಹತೆ ಕ್ರಮಕ್ಕೆ ತಡೆ — ನಿಬಂಧಕರ ನ್ಯಾಯಾಲಯದಿಂದ ತಾತ್ಕಾಲಿಕ ರಕ್ಷಣೆ
ಹಾಸನದ ಸಂಜೀವಿನಿ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಆರು ನಿರ್ದೇಶಕರನ್ನು ದುರುದ್ದೇಶದಿಂದ ಅನರ್ಹಗೊಳಿಸಿದ್ದ ಕ್ರಮಕ್ಕೆ ಸಹಕಾರ ಸಂಘಗಳ ನಿಬಂಧಕರ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ. ಅಧ್ಯಕ್ಷ ಪರಮೇಶ್ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಬೆಳಕಿಗೆ ತಂದರು. 2008ರಲ್ಲಿ ದಿ.ಎಚ್.ಎಸ್. ಪ್ರಕಾಶ್ ಅವರು ಸ್ಥಾಪಿಸಿದ್ದ ಬ್ಯಾಂಕ್‌ನ ನಿರ್ವಹಣೆಯಲ್ಲಿ 2020ರಿಂದಲೇ ಅಡೆತಡೆ ಉಂಟಾಗಿದೆ ಎಂದು ಆರೋಪಿಸಿದರು. 2024ರಲ್ಲಿ ಹೊಸ ನಿರ್ದೇಶಕರು ಆಯ್ಕೆಯಾದರೂ ಅವರನ್ನು ಆಡಳಿತಕ್ಕೆ ಬಿಡದೇ ಅನರ್ಹಗೊಳಿಸಲಾಯಿತು. ಮುಂದಿನ ವಿಚಾರಣೆ ಆಗಸ್ಟ್ 1 ರಂದು ನಿಗದಿಯಾಗಿದೆ.
Copy and paste this URL into your WordPress site to embed
Copy and paste this code into your site to embed