ಹಾಸನ ನಗರದ ಹಾಸನಂಬ ಡೆಂಟಲ್ ಕಾಲೇಜ್ ಸಮೀಪ ವಾಸವಾಗಿದ್ದ ಶ್ರೀ ಸದಾಶಿವಯ್ಯ ಬಿ.ಪಿ (ಶಿವಣ್ಣ) ಅವರು ಇಂದು (ಏಪ್ರಿಲ್ 13, 2026) ಲಿಂಗೈಕ್ಯರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 1.00 ಗಂಟೆಯವರೆಗೆ ಅವರ ನಿವಾಸದ ಬಳಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದ್ದು, ಬಳಿಕ ಶವ ಸಂಸ್ಕಾರವನ್ನು ಹಾಸನ ತಾಲ್ಲೂಕಿನ ಬಿಕ್ಕೋಡು ಹೋಬಳಿ ಬಿಳಿಗುಲಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಇವರ ನಿಧನಕ್ಕೆ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಸಂತಾಪ ಸೂಚಿಸಲಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಲಾಗಿದೆ.
– ಕಟ್ಟಾಯ ಶಿವಕುಮಾರ್
