ಹಾಸನ-ವೇತನವಿಲ್ಲದೆ ಏಳು ತಿಂಗಳು – ನ್ಯೂ ಮಿನರ್ವ ಮಿಲ್ ಕಾರ್ಮಿಕರಿಂದ ತೀವ್ರ ಪ್ರತಿಭಟನೆ

ಹಾಸನದ ನ್ಯೂ ಮಿನರ್ವ ಮಿಲ್ ಬಟ್ಟೆ ಫ್ಯಾಕ್ಟರಿಯ ಕಾರ್ಮಿಕರು ಕಳೆದ ಏಳು ತಿಂಗಳಿಂದ ವೇತನವಿಲ್ಲದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದು, ಎನ್.ಟಿ.ಸಿ ಘಟಕ ಪುನರಾರಂಭ ಹಾಗೂ ಬಾಕಿ ಸಂಬಳ ಪಾವತಿಗೆ ಆಗ್ರಹಿಸಿದ್ದಾರೆ.