ಹಾಸನ: ಶ್ರೇಯಸ್ ಪಟೇಲ್ ವಿರುದ್ಧ ಆಸ್ತಿ ಬಚ್ಚಿಟ್ಟ ಆರೋಪ — ಹೈಕೋರ್ಟ್ ವಿಚಾರಣೆಗೆ ಸಮ್ಮತಿ

ಹಾಸನ ಸಂಸದ ಶ್ರೇಯಸ್ ಪಟೇಲ್ ಅವರು ಲೋಕಸಭಾ ಚುನಾವಣಾ ವೇಳೆಯ ಅಫಿಡವಿಟ್‌ನಲ್ಲಿ ಆಸ್ತಿ ವಿವರಗಳನ್ನು ಬಚ್ಚಿಟ್ಟಿದ್ದಾರೆ ಎಂಬ ಆರೋಪದ ಬಗ್ಗೆ ಸಲ್ಲಿಸಿದ್ದ ತಕರಾರು ಅರ್ಜಿಗೆ ಹೈಕೋರ್ಟ್ ವಿಚಾರಣೆಗೆ ಸಮ್ಮತಿಸಿದ್ದು, ನ್ಯಾಯ ಸಿಗಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು ವಕೀಲ ದೇವರಾಜೇಗೌಡ. ಅಪಾರ ಅಕ್ರಮ ಆಸ್ತಿಗಳು ಹಾಗೂ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಆರೋಪವಿದ್ದು, ಶಾಸಕ ಕೆ.ಎಂ. ಶಿವಲಿಂಗೇಗೌಡ ಹಣ ಹಂಚಿದ ಆಡಿಯೋ ಕೂಡ ಸಾಕ್ಷಿ ಎನಿಸಿದೆ.