ಹಾಸನ: ಹಿಮ್ಸ್ ಆಸ್ಪತ್ರೆಯಲ್ಲಿ ಹೃದ್ರೋಗ ಹಾಗೂ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಆರಂಭಿಸಿ, ಜೋಳಕ್ಕೆ ಪರಿಹಾರ ನೀಡಿ – ರೈತ ಸಂಘದ ಹೋರಾಟ

ಹಾಸನದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನೂರಾರು ರೈತರು ಹಿಮ್ಸ್ ಆಸ್ಪತ್ರೆ ಆರಂಭಿಸಬೇಕೆಂದು ಹಾಗೂ ಜೋಳಕ್ಕೆ ಬಿಳಿ ಸುಳಿ ರೋಗದಿಂದ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಪಡಿತರ ಚೀಟಿ ಸಮಸ್ಯೆ, ಬಿತ್ತನೆ ಬೀಜದ ಕೊರತೆಗಳ ಕುರಿತು ಕೂಡ ಆಗ್ರಹ ವ್ಯಕ್ತವಾಯಿತು.