ಹಾಸನ: ನಗರದ ರಿಂಗ್ರಸ್ತೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾರ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರ ತಂಡ ಇಂದು ದಿಢೀರ್ ದಾಳಿ ನಡೆಸಿ, ಆಹಾರ ಸುರಕ್ಷತೆಗೆ ಸಂಬಂಧಿಸಿದ ಅನೇಕ ಗಂಭೀರ ಅಕ್ರಮಗಳನ್ನು ಪತ್ತೆಹಚ್ಚಿದೆ. ಜನರ ಆರೋಗ್ಯವನ್ನು ಸಮಗ್ರವಾಗಿ ಕಾಪಾಡುವ ಉದ್ದೇಶದಿಂದ ನಡೆಸಲಾದ ಈ ದಾಳಿಯ ವೇಳೆ ಬಹುಸಂಖ್ಯೆಯಲ್ಲಿ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿವೆ.
ಅವಧಿ ಮೀರಿದ ಆಹಾರ ವಸ್ತುಗಳ ಬುಡಮೂಲಕ್ಕೆ ಸರ್ಕಾರಿ ಬೀಗ
ದಾಳಿಯಲ್ಲಿ ತಯಾರಿಸಿದ ದಿನಾಂಕ (Manufacturing Date) ಉಲ್ಲೇಖಿಸದ ಪ್ಯಾಕೇಜುಗಳು, ಅವಧಿ ಮೀರಿದ (Expiry Date) ಸ್ನಾಕ್ಸ್ ಮತ್ತು ಇತರೆ ತಿನ್ನುವ ಪದಾರ್ಥಗಳು, ದುರ್ವಾಸನೆ ಬೀರುತ್ತಿದ್ದ ಹಾಗೂ ಗುಣಮಟ್ಟ ಕಳೆದುಕೊಂಡಿರುವ ಆಹಾರ ವಸ್ತುಗಳು ಪತ್ತೆಯಾಗಿವೆ.
ಗ್ರಾಹಕರ ಆರೋಗ್ಯಕ್ಕೆ ಅಪಾಯಕಾರಿಯಾದ ಇಂತಹ ಎಲ್ಲಾ ಪದಾರ್ಥಗಳನ್ನು ಅಧಿಕಾರಿಗಳು ತಕ್ಷಣ ವಶಪಡಿಸಿಕೊಂಡರು.
ನಿಷೇಧಿತ ಪ್ಲಾಸ್ಟಿಕ್ ಲೊಟ್ಟೆಗಳು, ಗಾಜಿನ ಬಾಟಲಿಗಳ ಅಕ್ರಮ ಬಳಕೆ
ಪರಿಸರ ನಿಯಮ ಉಲ್ಲಂಘಿಸುತ್ತಾ ಪ್ಲಾಸ್ಟಿಕ್ ಲೊಟ್ಟೆಗಳನ್ನು ಬಳಸಲಾಗುತ್ತಿದ್ದ ಹಲವಾರು ಅಂಗಡಿಗಳು ಅಧಿಕಾರಿಗಳ ರಡಾರ್ಗೆ ಸಿಕ್ಕಿವೆ. ಆಹಾರದ ಗುಣಮಟ್ಟ ಮತ್ತು ಸ್ವಚ್ಚತೆಗೆ ವಿರುದ್ಧವಾಗಿರುವ ಇಂತಹ ವಸ್ತುಗಳನ್ನು ಕೂಡಾ ಜಪ್ತಿ ಮಾಡಲಾಗಿದೆ.
ಪರವಾನಿಗೆ ಇಲ್ಲದ ಅಂಗಡಿಗಳಿಗೆ ನೋಟಿಸ್ – ಕಾನೂನಿಗೆ ಒಳಪಡದಿದ್ದರೆ ಕಠಿಣ ಕ್ರಮ
ಬಾರ್ ಮತ್ತು ಮಧ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ನವೀಕರಣ (Renewal) ಕಡ್ಡಾಯವಾಗಿದ್ದು, ನವೀಕರಿಸದ ಹಲವಾರು ಮಳಿಗೆಗಳಿಗೆ ತಕ್ಷಣ ನವೀಕರಿಸುವಂತೆ ಸೂಚನೆ ನೀಡಲಾಗಿದೆ. ಪರವಾನಿಗೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ನಿಗದಿತ ಅವಧಿಯಲ್ಲಿ ಪರವಾನಿಗೆ ಪಡೆಯದಿದ್ದರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: Watch Video- ಹಾಸನ: ಹಸು ಮಾರಾಟ ಮಾಡಿ RTI ದಾಖಲೆ ಪಡೆದ ರೈತ – 16 ಸಾವಿರ ಪುಟಗಳ ದಾಖಲೆಗಾಗಿ 32 ಸಾವಿರ ರೂ. ಪಾವತಿ!
“ಜನರ ಆರೋಗ್ಯಕ್ಕೆ ಹಾನಿ ಮಾಡಿದರೆ ದಯೆಯಿಲ್ಲ” – ಆರೋಗ್ಯ ನಿರೀಕ್ಷಕರ ಎಚ್ಚರಿಕೆ
ದಾಳಿ ವೇಳೆ ಮಾತನಾಡಿದ ಆರೋಗ್ಯ ನಿರೀಕ್ಷಕರು ಆದೇಶ್ ಕುಮಾರ್ ತಿಳಿದು,
“ನಾಗರಿಕರ ಆರೋಗ್ಯಕ್ಕೆ ಹಾನಿಯಾಗುವ ಯಾವುದೇ ಅಕ್ರಮವನ್ನು ಸಹಿಸುವುದಿಲ್ಲ. ಬಾರ್ ಮತ್ತು ರೆಸ್ಟೋರೆಂಟ್ಗಳು ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ದಾಳಿಗಳನ್ನು ಇನ್ನಷ್ಟು ತೀವ್ರಗೊಳಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಆರೋಗ್ಯ ಇಲಾಖೆಯ ಸಂಯುಕ್ತ ದಾಳಿಗೆ ಅಧಿಕಾರಿಗಳ ಬೆಂಬಲ
ಈ ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳಾದ ಶಶಿರಾಜ್ ಅರಸ್, ತುಳಸಿ ಪ್ರಸಾದ್, ದೀಪಕ್ ಸೇರಿದಂತೆ ಹಲವು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ನಗರದಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡಲು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತೃತ ಪರಿಶೀಲನೆಗಳು ನಡೆಯಲಿವೆ ಎಂದು ಇಲಾಖೆ ತಿಳಿಸಿದೆ.
ನಗರದಲ್ಲಿ ಆಹಾರ ಸುರಕ್ಷತೆಯ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ, ಅಕ್ರಮಗಳಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆಯ ಈ ಕ್ರಮ ಶ್ಲಾಘನೀಯವೆಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
