ಹಾಸನ : ವಿವಿಧ ಕಸುಬುದಾರರ ಕಾರ್ಮಿಕರ ಸಂಘದ ಹಾಸನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಸುನೀತಾ ಮಂಜುನಾಥ್ ರವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ರವಿತೇಜಸ್ ತಿಳಿಸಿದ್ದಾರೆ.
ಸುನೀತಾ ಮಂಜುನಾಥ್ ವೃತ್ತಿಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಶಿವಲೀಲಾ ಕನ್ನಡ ಚಲನಚಿತ್ರದಲ್ಲಿ ನಟಿಸಿದ್ದು ಚುಟುಕು ಸಾಹಿತಿಯಾಗಿರುವ ಇವರನ್ನು ನೇಮಿಸಲಾಗಿದೆ ಎಂದು ರವಿತೇಜ ತಿಳಿಸಿದ್ದಾರೆ.

ಇವರನ್ನು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ ನಂ ಲೋಕೇಶ,ರಾಜ್ಯ ಉಪಾಧ್ಯಕ್ಷ ವೇಣು, ಮಹೇಶ್ ಬೇಲೂರ್, ಮಂಜುಳಾ ಪಾವಗಡ, ಆಲಿಲ್ ಗಾರ್ಡನ್ ಅಧ್ಯಕ್ಷ ಲೋಕೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಹಾಸನ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಇನ್ನಿತರರು ಅಭಿನಂದಿಸಿದ್ದಾರೆ.

[…] ಇದನ್ನು ಓದು: ಹಾಸನ : ವಿವಿಧ ಕಸುಬುದಾರರ ಕಾರ್ಮಿಕರ ಸಂಘದ ಹ… […]