ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಆಯೋಜನೆಯಲ್ಲಿ ಜಿಲ್ಲಾಡಳಿತದಿಂದ ಪಾರದರ್ಶಕ ಕೆಲಸ ಆಗುತ್ತಿಲ್ಲ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಆರೂಪಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿಯಮದಂತೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ದೇವಸ್ಥಾನ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಮೇಲುಸ್ತುವಾರಿಯಾಗಿ ಜಿಲ್ಲಾಧಿಕಾರಿ ಇರುತ್ತಾರೆ ಆದರೆ ಇವರ ಆಡಳಿತ ಸಂಪೂರ್ಣ ಹದಗೆಟ್ಟಿ ಹೋಗಿದೆ ಎಂದು ಆರೋಪಿಸಿದರು.
ಈ ಬಾರಿ ವಿಐಪಿ ,ವಿವಿಐಪಿ ಪಾಸ್ ಗಳನ್ನು ರದ್ದು ಮಾಡಲಾಗಿದೆ ಗೋಲ್ಡನ್ ಪಾಸನ್ನು ವಿತರಿಸುವ ಕುರಿತು ನಿರ್ಧರಿಸಲಾಗಿದೆ.ಆದರೆ ಈ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಈ ಪಾಸ್ ಗಳನ್ನು ಯಾರ್ಯಾರಿಗೆ ನೀಡ ಲಾಗಿದೆ ಎಂಬುದನ್ನು ಸಾರ್ವಜನಿ ಕವಾಗಿ ಪ್ರದರ್ಶಿ ಸಬೇಕು ಎಂದು ಒತ್ತಾಯಿಸಿದರು.
ನಮಗೆ ತಿಳಿದಿರುವ ಮಾಹಿತಿ ಯಂತೆ ಪ್ರತಿದಿನ ಒಂದು ಸಾವಿರ ಪಾಸಿನಂತೆ 18೦೦೦ ಪಾಸ್ ಮುದ್ರಿಸಲು ತೀರ್ಮಾನಿಸಲಾಗಿತ್ತು ಆದರೆ ಈಗಾಗಲೇ 4೦,೦೦೦ ಪಾಸ್ ಗಳನ್ನು ಮುದ್ರಿಸಲಾಗಿದೆ ಎಂದು ಗೊತ್ತಾಗಿದೆ ಎಂದರು .
ಕಳೆದ ಬಾರಿ ೫ ಪ್ರತಿಶತ ಪಾಸ್ ಗಳು ಅಧಿಕೃತವಾಗಿ ಮುದ್ರಿತವಾದರೆ ಉಳಿದ 95ರಷ್ಟು ಪಾಸ್ ಗಳು ಅನಧಿ ಕೃತವಾಗಿ ಮುದ್ರಿತವಾಗಿದೆ.ಇದರಿಂದ ಸಾಕಷ್ಟು ಅವ್ಯವಹಾರ ನಡೆದಿದೆ ಈ ಬಗ್ಗೆ ದೇವಸ್ಥಾನ ಆಡಳಿತ ಅಧಿಕಾರಿ ಮತ್ತು ಉಪವಿಭಾಗಾ ಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ದೂರಿದರು.
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಅಳವಡಿಸುವ ಸಿಸಿ ಕ್ಯಾಮೆರಾ, ವಿದ್ಯುತ್ ಅಲಂಕಾರ ಸೇರಿದಂತೆ ಇತರೆ ಟೆಂಡರ್ ಗಳು ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ಜರ್ಮನ್ ಟೆಂಟ್ ಹಾಗೂ ಬ್ಯಾರಿಕೆಡ್ ನಿರ್ಮಿಸಲು 60 ರಿಂದ 65 ಲಕ್ಷ ಸಾಕಾಗುತ್ತದೆ ಆದರೆ 86.99 ಲಕ್ಷಕ್ಕೆ ಟೆಂಡರ್ ನೀಡಲಾಗಿದೆ.
ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿ ಕೆಗೆ ಖರೀದಿ ಮಾಡಿದರೂ 20 ಲಕ್ಷ ವೆಚ್ಚವಾಗುತ್ತದೆ ಆದರೆ 60 ಲಕ್ಷಕ್ಕೆ ಬಾಡಿಗೆ ಪಡೆದಿರುವುದು ಏಕೆ? ಇದರಿಂದ ಲಕ್ಷಾಂತರ ರೂ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ಆರೋಪಿಸಿ ದರು . ಜಾತ್ರಾ ಮಹೋತ್ಸವದಿಂದ ಕೋಟ್ಯಾಂತರರೂ ಹಣ ಹರಿದು ಬರುತ್ತಿದೆ. ಈ ಹಣ ಸದ್ಬಳಕೆ ಆಗಿದೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ ,ಈ ಹಣದಿಂದ ದೇವಾಲಯ ಸುತ್ತಮುತ್ತಲಿನ ಕಟ್ಟಡಗಳ ಖರೀದಿ ಮಾಡಿ ದೇವಾಲಯ ಆವರಣ ವಿಸ್ತರಿಸಬ ಹುದಾಗಿದೆ ಈ ಕುರಿತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಇದನ್ನು ಓದಿ: ಹಾಸನ : ಅ.5 ರಂದು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ ಮತ್ತು ಅಗ್ನಿಹೋತ್ರ ಕಾರ್ಯಗಾರ
ಹೈಕಮಾಂಡ್ ಒಪ್ಪಿದರೆ ಹಾಸನದಿಂದ ಸ್ಪರ್ಧಿಸುವೆ:
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್ ಒಪ್ಪಿದರೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ದೇವರಾಜೇಗೌಡ ಹೇಳಿದರು.
ಈ ಹಿಂದೆ ಬಿಜೆಪಿ ಯಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯು ಲ್ಯಾಂಡ್ ಮಾಫಿಯಾ ಜೊತೆಗೆ , ಪಕ್ಷದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ.ಕಾಂಗ್ರೆಸ್ ಲೋಕಸಭಾ ಸದಸ್ಯರೊಂದಿಗೆ ಒಡಾಂಬಡಿಕೆ ಜೊತೆಗೆ ಗಣಪತಿ ಉತ್ಸವ ಸೇರಿದಂತೆ ನಾನಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ಮನಗಂಡು ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ ಅದಕ್ಕೆ ಬದ್ಧನಾಗಿದ್ದು ಹೊಳೆನರಸೀಪುರ ಅಥವಾ ಹಾಸನದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆದಾರ ಶಿವರಾಂ ,ನಾಗರಾಜ ಇದ್ದರು.
