ಹಾಸನ: ಸರ್ಕಾರದಿಂದ ಹಮ್ಮಿಕೊಂಡಿರುವ ಸಾಮಾಜಿಕ ಆರ್ಥಿಕ ಗಣತಿ ಅಸಮರ್ಪಕವಾಗಿದ್ದು , ಮರುಗಣತಿ ಅಥವಾ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಭುವನಾಕ್ಷಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತಿಗಣತಿ ಧರ್ಮದ ಕಾಲಮ್ನಲ್ಲಿ ಹಿಂದೂ, ಇಸ್ಲಾಂ, ಕ್ರೈಸ್ತ ಸೇರಿದಂತೆ ಹನ್ನೊಂದು ಆಯ್ಕೆಗಳನ್ನು ನೀಡಲಾಗಿದೆ. ಆದರೆ ನಮ್ಮ ಲಿಂಗಾಯತ ಧರ್ಮದ ಆಯ್ಕೆಯನ್ನು ಕೈ ಬಿಡಲಾಗಿದ್ದು ಇದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಆರೋಪಿಸಿದರು .
ಇದೀಗ ವೀರಶೈವ ಲಿಂಗಾಯಿತ ಜಾತಿಯವರು ಹಿಂದೂ ಧರ್ಮ ಎಂದು ನಮೂದಿಸಿದರೆ ನಮಗೆ ಸಿಗಬೇಕಾದ ಅನೇಕ ಸವಲತ್ತುಗಳು ದೊರೆಯುವುದಿಲ್ಲ. ಲಿಂಗಾಯಿತ ಎಂದು ಧರ್ಮವಾಗಿ ಆಯ್ಕೆ ಮಾಡಿದರೆ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಮಕ್ಕಳಿಗೆ ೫೦ ಪ್ರತಿಶತ ಸೀಟುಗಳು ಮೀಸಲಾತಿ ದೊರೆಯುತ್ತದೆ ಹಾಗೂ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿದೆ, ವಿಶೇಷ ಉದ್ಯೋಗ ತರಬೇತಿ ಶಾಲಾ-ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ ಶೈಕ್ಷಣಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ಸ್ಥಾಪಿಸಬಹುದಾಗಿದೆ .ಐಎಎಸ್ ಕೆಎಎಸ್ ಸೇರಿದಂತೆ ಉನ್ನತ ಪರೀಕ್ಷೆಗಳಲ್ಲಿ ಸರ್ಕಾರದ ವತಿಯಿಂದ ತರಬೇತಿ ಇತ್ಯಾದಿ ಸೌಲಭ್ಯ ದೊರೆಯಲಿದೆ ಆದ್ದರಿಂದ ಧರ್ಮದ ಕಾಲಂನಲ್ಲಿ ಲಿಂಗಾಯಿತ ಎಂದು ನಮೂದಿಸುವಂತೆ ಮನವಿ ಮಾಡಿದರು.
ಲಿಂಗಾಯತ ಧರ್ಮದ ಆಯ್ಕೆಯನ್ನು ಗಣತಿಯಲ್ಲಿ ನೀಡಲಾಗಿಲ್ಲ ಆದ್ದರಿಂದ ಸರ್ಕಾರ ಪುನರ್ ಪರಿಶೀಲಿಸಿ ಗಣತಿಯನ್ನು ಮರು ಚಾಲನೆ ನೀಡಬೇಕು ಅಥವಾ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಲೂ ಜಾತಿಗಣತಿಯಲ್ಲಿ ಪಾಲ್ಗೊಳ್ಳುವವರು ಧರ್ಮದ ಎಂಟನೇ ಕಾಲಮ್ನಲ್ಲಿ ಕ್ರಮ ಸಂಖ್ಯೆ ೧೧ ರಲ್ಲಿನ ಇತರೆ ಎಂಬ ಜಾಗದಲ್ಲಿ ಲಿಂಗಾಯತ ಧರ್ಮ ಎಂದು, ಜಾತಿ ಲಿಂಗಾಯತ ಎಂದು ಉಪಜಾತಿ ಕಾಲಂನಲ್ಲಿ ನಿಮ್ಮ ನಿಮ್ಮ ಉಪಜಾತಿಯನ್ನು ಬರೆಯುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಒಂಬೇಶ್, ಲತೇಶ್ ಇದ್ದರು
