Oplus_16908288
ಹಾಸನ- ಕರ್ನಾಟಕ ಕೆ.ಎಲ್.ಎಸ್. ಪ್ರದೇಶದಲ್ಲಿ ತಂಬಾಕು ಬೋಡ್ ಮೇಲ್ವಿಚಾರಣೆಯಲ್ಲಿ ನಡೆದ ನವಂಬರ್ ಮತ್ತು ಜನವರಿಯಲ್ಲಿ ನಡೆದ ತಂಬಾಕು ಹರಾಜುಗಳು ಪ್ರಾರಂಭದಲ್ಲಿ ಉತ್ತಮ ಬೆಲೆ ತಂಬಾಕು ಕೊಳ್ಳುವ ಕಂಪನಿಯವರು ಕೊಂಡಿದ್ದರು. ಅದರೆ ಇತ್ತೀಚಗೆ ಕೇಂದ್ರ ಸರ್ಕಾರವು ಆಯ್ದ ತಂಬಾಕಿನ ಮೇಲೆ ಶೇ. 40/ ಜಿ.ಎಸ್.ಟಿ ವಿಧಿಸಿರುವುದ ಪರಿಣಾಮ ತಂಬಾಕಿನ ಬೆಲೆ ಕುಸಿದಿದೆ.ಅದ್ದರಿಂದ ಜಿ.ಎಸ್.ಟಿ. ತೆಗೆದು ತಂಬಾಕಿಗೆ ಉತ್ತಮ ಬೆಲೆ ಸಿಗುವಂತೆ ಕೇಳಿಕೊಳ್ಳಲಾಗಿದೆ ಎಂದು ಲೋಕಸಭಾ ಕಲಾಪದಲ್ಲಿ ಮಾತನಾಡಿದ್ದೇನೆ ಎಂದು ಲೋಕಸಭಾ ಸಂಸದರಾದ ಶ್ರೇಯಸ್ ಪಟೇಲ್ ತಿಳಿಸಿದರು.
ನಮ್ಮ ಹಾಸನ ಜಿಲ್ಲೆಯ ರಾಮನಾಥಪುರದ ತಂಬಾಕು ಹರಾಜು 2 ಮಾರುಕಟ್ಟೆಗೆ ವ್ಯಾಪ್ತಿಗೆ ಬರುವ ಅರಕಲಗೂಡು, ತಾಲ್ಲೂಕು, ಹೊಳೆನರಸಿಪುರ, ಹಾಸನ ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕುಗಳ ಮುಂತಾದ ಕಡೆಗಳಲ್ಲಿ ಈ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯ ವ್ಯಾಪ್ತಿಗೆ ಬರುವ ಸುಮಾರು 10 ಸಾವಿರಕ್ಕೂ ಹೆಚ್ಚು ಬೆಳಗಾರರಿದ್ದು ಸುಮಾರು 30 ರಿಂದ 35 ಸಾವಿರ ಹೆಕ್ಷರ್ ಪ್ರದೇಶದಲ್ಲಿ ತಂಬಾಕು ಬೆಳೆಯುತ್ತಾರೆ. ನಮ್ಮ ಹಾಸನ ಜಿಲ್ಲೆಯ ತಂಬಾಕು ಬೆಳೆಗಾರರ ಸಂಕಷ್ಟವನ್ನು ಮತ್ತು ಅವರ ಅರ್ಥಿಕ ಸಂಕಷ್ಡಗಳನ್ನು ಬಗೆಹರಿಸಿಕೊಡುವಂತೆ ಮನವಿ ಮಾಡಲಾಗಿದೆ ಎಂದರು.
ಅಲ್ಲದೇ ತಂಬಾಕಿ ಬೆಲೆ ಕುಸಿತ ಕುರಿತಂತೆ ನಾನು ಈಗಾಗಲೆ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಜೊತೆ ಮಾತನಾಡಿದ್ದೇನೆ. ಬೆಲೆ ಇಳಿಕೆ ಕುರಿತು ನಾನು ಮತೊಮ್ಮೆ ವಾಣಿಜ್ಯ ಸಚಿವರನ್ನು ಭೇಟಿ ಅಬಕಾರಿ ಸುಂಕವನ್ನು ತೆಗೆದು ತಂಬಾಕು ಬೆಲೆಗಾರರನ್ನು ಬೆಲೆ ಕುಸಿತದಿಂದ ಪಾರುಮಾಡಿ ಉತ್ತಮ ಬೆಲೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಸಂಸದರಾದ ಶ್ರೇಯಸ್ ಪಟೇಲ್ ತಿಳಿಸಿದರು.
