ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಬೆಂಗಳೂರು, ಮೈಸೂರು, ಹಾಸನ) ಹಾಗೂ ಶ್ರೀ ಶಾರದ ಕಲಾಸಂಘ, ವಿಜಯನಗರ ಬಡಾವಣೆ ಇವರ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ನಗರದ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಏಪ್ರಿಲ್ 19, 2026ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಈ ಕಾರ್ಯಕ್ರಮವನ್ನು ಹಾಸನ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಪತ್ರಕರ್ತ ರವಿ ನಾಕಲಗೂಡು ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಕಸಾಪ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ತಾರಾನಾಥ್, ಈ. ಕೃಷ್ಣೇಗೌಡ, ಪುಟ್ಟರಾಜಪ್ಪ, ವಕೀಲ ಯೋಗೇಶ್, ವೆಂಕಟೇಶ್ ಹಾಗೂ ಕೃಷ್ಣದಾಸ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಾಹಿತಿ ಗೊರೂರು ಅನಂತರಾಜು ಸೇರಿದಂತೆ ಹಲವಾರು ಗಣ್ಯರು ಹಾಜರಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀಮತಿ ರಾಣಿ ತಂಡದಿಂದ ಲಲಿತ ಸಹಸ್ರನಾಮ, ಶ್ರೀಮತಿ ಕಲಾವತಿ ಮಧುಸೂಧನ್ ಮತ್ತು ಕುಸುಮ ಎನ್.ಕೆ ಅವರಿಂದ ವೀಣಾವಾದನ ಹಾಗೂ ಭಕ್ತಿಗೀತೆಗಳು, ಹೆಚ್.ಜಿ. ಗಂಗಾಧರ್ ತಂಡದಿಂದ ಸುಗಮ ಸಂಗೀತ, ಸಾವಿತ್ರಮ್ಮ ತಂಡದಿಂದ ಜಾನಪದ ನೃತ್ಯ, ಯಶೋಧ ತಂಡದಿಂದ ಸೋಬಾನೆ ಪದಗಳು, ವಿರುಪಾಕ್ಷ ತಂಡದಿಂದ ರಂಗಗೀತೆ, ಗ್ಯಾರಂಟಿ ರಾಮಣ್ಣ ತಂಡದಿಂದ ‘ಸಂಕೋಲೆ’ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.
ಇದೇ ವೇಳೆ ದುದ್ದ ಯೋಗೇಂದ್ರ, ದೊಡ್ಡಳ್ಳಿ ರಮೇಶ್ ಹಾಗೂ ವಿಜಯ್ ಕುಮಾರ್ ಅವರಿಂದ ತತ್ವಪದ ಮತ್ತು ಜನಪದ ಗಾಯನ, ಮೂಡಲಪಾಯ ಯಕ್ಷಗಾನ ‘ಭೀಮಾರ್ಜುನ ಕಾಳಗ’ ಪ್ರದರ್ಶನವೂ ನಡೆಯಲಿದೆ. ಕಾರ್ಯಕ್ರಮದ ಸಾರಥ್ಯವನ್ನು ಕಲಾವಿದ ಹೆಚ್.ಜಿ. ಗಂಗಾಧರ್ ವಹಿಸಿಕೊಂಡಿದ್ದಾರೆ.