ಹಾಸನ- ಸುಶಿಕ್ಷಿತರು ಆ ದೇಶದ ಮುಖವಾಣಿ ಇದ್ದಂತೆ ಎಂದು ವಿಶ್ವ ಮಾನವ ಹಕ್ಕುಗಳ ರಕ್ಷಣಾ ಆಯೋಗದ ವಿಶ್ವಸ್ತ ಮಂಡಳಿ ನವದೆಹಲಿಯ ಸದಸ್ಯ ನಾಡಶ್ರೀ ಬಾ ನಂ ಲೋಕೇಶ ಅಭಿಪ್ರಾಯ ಪಟ್ಟರು.
ಶ್ರೀಕಂಠ ಪುರ ಅಂಚೆಪಾಳ್ಯದ ಕ್ರಿಕೆಟ್ ಕ್ರೀಡಾoಗಣದಲ್ಲಿ ಟಿನಿ ಹಾರ್ಟ್ಸ್ ಶಾಲೆಯಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಹರ್ಷೋತ್ಸವ-4 ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನ್ನಾಡುತ್ತ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಟಿನಿ ಹಾರ್ಟ್ಸ್ ವಿದ್ಯಾ ಸಂಸ್ಥೆಯಲ್ಲಿ ಕೇವಲ ಪುಸ್ತಕದ ಜ್ಞಾನವನ್ನು ಪಡಿಮೂಡಿಸುವುದಕ್ಕೆ ಸೀಮಿತವಾಗದೆ ಸಾಹಿತ್ಯ, ಸಂಸ್ಕೃತಿ, ಸಂಗೀತ, ಕಲೆ ಹಾಗೂ ಕ್ರೀಡೆಗೆ ಉತ್ತೇಜನ ಕೊಡುತ್ತಿರುವುದರಿಂದ ವಿದ್ಯಾರ್ಥಿಗಳ ಸರ್ವಾoಗೀಣ ಪ್ರಗತಿ ಸಾಧ್ಯವಾಗುತ್ತಿದೆ. ಇಂತಹ ವಿದ್ಯಾ ಸಂಸ್ಥೆಯಲ್ಲಿ ಕಲಿತ ಮಗು ಉತ್ತಮ ಭವಿಷ್ಯ ಕಟ್ಟಿಕೊಳ್ಳುತ್ತದೆ ಎಂದರು.
ಗೌರವ ಉಪಸ್ಥಿತರಿದ್ದ ಡಾ. ಆದರ್ಶ ಹೆಚ್ ಆರ್ ಮಾತನ್ನಾಡುತ್ತಾ ಪೋಷಕರು ಶಾಲೆಯೊಂದಿಗೆ ಸದಾಕಾಲ ಒಡನಾಟ ಇಟ್ಟುಕೊಂಡಿದ್ದರೆ ಮಗುವಿನ ಬೆಳವಣಿಗೆ ಹಾಗೂ ಅಭಿವೃದ್ಧಿ ಗೆ ನಾಂದಿ ಹಾಡಿದಂತೆ. ಮಗುವಿನ ಕಲಿಕೆ ಕೇವಲ ಶಾಲೆಗೆ ಸೀಮಿತಗೊಳಿಸದೇ ಮನೆಯಲ್ಲಿ ಔಪಚಾರಿಕ ತಿಳುವಳಿಕೆ ನೀಡಬೇಕು ಎಂದು ನುಡಿದರು.
ಉಪನ್ಯಾಸಕಿ ಹಾಗೂ ಲೇಖಕಿ ಸೌಮ್ಯಶ್ರೀ ಎ ಪಿ ಮಾತನ್ನಾಡುತ್ತಾ ಮಗುವಿನ ಮನೋ ವಿಕಾಸ ಹಂತ ಹಂತವಾಗಿ ಆಗುತ್ತಾ ಹೋಗುತ್ತದೆ. ಈ ಕ್ರಿಯೆ ನಡೆಯುವ ಸಂದರ್ಭದಲ್ಲಿ ಪೋಷಕರು ಮಗುವಿನ ಮನಸ್ಸಿನ ಮೇಲೆ ಒತ್ತಡ ಹಾಕದೆ ನಾಜುಕಾಗಿ ನಡೆದುಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಕಾರ್ಯದರ್ಶಿ ಭವ್ಯ ಪಿ ನಮ್ಮ ಶಾಲೆಯ ಬೆಳವಣಿಗೆ ಕಾಲದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದೇವೆ. ನಮ್ಮ ಶಾಲೆಯ ಮಕ್ಕಳೇ ನಮ್ಮ ಸಂಸ್ಥೆಯ ಆಸ್ತಿ. ಸುಂದರ ತೋಟದಲ್ಲಿ ಇರುವ ಸುಗಂಧ ಪರಿಮಳ ಬೀರುವ ಪುಷ್ಪಗಳಂತೆ. ಈ ಪುಷ್ಪಗಳು ಮುದುಡದ ಹಾಗೆ ನೋಡಿಕೊಳ್ಳುವೆವು ಎಂದರು.
ಶಾಲೆಯ ಕೋಶಾಧ್ಯಕ್ಷರಾದ ಪವಿತ್ರ ಮಾತನ್ನಾಡುತ್ತ ನಾವು ನಮ್ಮ ಸಂಸ್ಥೆಯನ್ನು ಇಷ್ಟೆಲ್ಲಾ ಬೆಳೆಸುತ್ತಿರುವುದು ಸಮಾಜಕ್ಕೆ ಏನಾದರೂ ನಮ್ಮಿಂದ ಕೊಡುಗೆಯನ್ನು ಕೊಡುವ ಹಂಬಲದಿಂದ. ನಮ್ಮಿಂದ ಕಲಿತ ವಿದ್ಯಾರ್ಥಿಗಳು ಸಮಾಜದ ಆಸ್ತಿಯಾದರೆ ನಮ್ಮ ಶ್ರಮ ಸಾರ್ಥಕ ವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ಜಯಗಳಿಸಿದ ಪೋಷಕರಿಗೆ, ಮಕ್ಕಳಿಗೆ ಬಹುಮಾನ ಕೊಟ್ಟು ಸನ್ಮಾನಿಸಲಾಯಿತು.

ಇದೆ ಸಂದರ್ಭದಲ್ಲಿ ಗುರುವಂದನೆ ಸಲ್ಲಿಸುವುದರೊಂದಿಗೆ ಎನ್ ಟಿ ಟಿ ಕೋಚಿಂಗ್ ಸೆಂಟರ್ ಉದ್ಘಾಟನೆ ಮಾಡಲಾಯಿತು.ಸಂಸ್ಥೆಯ ನಿರ್ಮಾತ್ರುಗಳಾದ ಭವ್ಯ ಪಿ, ರತೀಶ್ ಬಿ.ಸಿ,ಪವಿತ್ರ, ಗಿರೀಶ್, ಪುರುಷೋತ್ತಮ್ ಎಂ ಬಿ ಸಮಾಜ ಸೇವಕರಾದ ಶ್ರೀನಿವಾಸ ಟಿ, ಮುಖೇಶ್,ಇನ್ನಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ, ಪೋಷಕರಿಂದ ಮತ್ತು ಶಿಕ್ಷಕರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರ ಮನಸ್ಸತುಸ್ಟಗೋಳಿಸಿತು.
