ಹಾಸನ, ಅಕ್ಟೋಬರ್ 24: ನಿರಂತರ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮತ್ತಿಗೋಡು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಜವರಮ್ಮ (63) ಎಂದು ಗುರುತಿಸಲಾಗಿದೆ. ನಿರಂತರ ಮಳೆಯಿಂದಾಗಿ, ಬೆಳಿಗ್ಗೆ ಜಾವದಲ್ಲಿ ಮನೆ ಗೋಡೆ ಕುಸಿದು ಜವರಮ್ಮ ಮೇಲೆ ಬಿದ್ದು ಸಾವು ಸಂಭವಿಸಿದೆ. ಇನ್ನೂ ಮನೆಯಲ್ಲೇ ಇದ್ದ ಆಕೆಯ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸ್ಥಳಕ್ಕೆ ಅರಕಲಗೂಡು ಶಾಸಕ ಎ. ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಸ್ಥಳೀಯರು ನಿರಂತರ ಮಳೆ ಮತ್ತು ಹಳೆಯ ಮನೆಗಳ ಸ್ಥಿತಿಗೆ ತಕ್ಕಂತೆ ಜಾಗ್ರತೆ ವಹಿಸಲು ಸೂಚಿಸುತ್ತಿದ್ದಾರೆ.

[…] ಇದನ್ನು ಓದಿ : ಹಾಸನ: ನಿರಂತರ ಮಳೆಗೆ ಮನೆಯ ಗೋಡೆ ಕುಸಿದು ಮಹ… […]