ಹಾಸನ, ಅಕ್ಟೋಬರ್ 12: ಜಿಲ್ಲೆಯ ಪ್ರಸಿದ್ಧ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಭಕ್ತರ ಅಪಾರ ದರ್ಶನದಿಂದ ಕೇವಲ ಎರಡು ದಿನಗಳಲ್ಲಿ ₹2.24 ಕೋಟಿಯ ದಾಖಲೆ ಆದಾಯ ದಾಖಲಿಸಿದೆ.
ಶುಕ್ರವಾರದಿಂದ ಭವ್ಯವಾಗಿ ಆರಂಭವಾದ ಈ ಜಾತ್ರೆಯಲ್ಲಿ, ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ₹300 ಹಾಗೂ ₹1000 ವಿಶೇಷ ದರ್ಶನ ಟಿಕೆಟ್ಗಳ ಮಾರಾಟದಲ್ಲಿ ಭಾರೀ ಸಂಗ್ರಹವಾಗಿದೆ.
🔸 ₹300 ವಿಶೇಷ ದರ್ಶನ ಟಿಕೆಟ್ಗಳು:
27,759 ಟಿಕೆಟ್ಗಳು ಮಾರಾಟವಾಗಿ ₹83,27,700 ರೂ. ಆದಾಯ.
🔸 ₹1000 ವಿಶೇಷ ದರ್ಶನ ಟಿಕೆಟ್ಗಳು:
12,396 ಟಿಕೆಟ್ಗಳು ಮಾರಾಟವಾಗಿ ₹1,23,96,000 ರೂ. ಸಂಗ್ರಹ.
🔸 ಲಾಡು ಪ್ರಸಾದ ಮಾರಾಟ:
₹17,33,700 ರೂ. ಆದಾಯ.
ಒಟ್ಟಾರೆಯಾಗಿ ₹2 ಕೋಟಿ 24 ಲಕ್ಷ 57 ಸಾವಿರ 400 ರೂ. ಸಂಗ್ರಹವಾಗಿದ್ದು, ಹಾಸನಾಂಬ ದೇವಸ್ಥಾನ ಆಡಳಿತಕ್ಕೆ ಇದು ದಾಖಲೆಮಟ್ಟದ ಸಾಧನೆ ಆಗಿದೆ.
ದೇವಸ್ಥಾನ ಆಡಳಿತ ಮಂಡಳಿ ಪ್ರಕಾರ, ಮುಂದಿನ ದಿನಗಳಲ್ಲಿ ಭಕ್ತರ ಸಂಚಾರ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಇದರೊಂದಿಗೆ ಆದಾಯವು ಕಳೆದ ವರ್ಷದ ಹೋಲಿಕೆಯಲ್ಲಿ ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ –ಹಾಸನಾಂಬ ದರ್ಶನ: ಸಂಸದರಿಂದ ‘ಗೋಲ್ಡನ್ ಐಡಿಯಾ’ – ₹5 ಲಕ್ಷ ನೀಡಿ 1,200 ಟಿಕೆಟ್ ಖರೀದಿ, ಕಾರ್ಯಕರ್ತರಿಗೆ ವಿತರಣೆ
