ಹಾಸನದಲ್ಲಿ ಹೃದಯ ತಪಾಸಣೆ ಅಭಿಯಾನ: ಎಳೆವಯಸ್ಸಿನ ಹೃದಯಾಘಾತಗಳ ಬೆನ್ನಲ್ಲೇ ತುರ್ತು ಮುನ್ನೆಚ್ಚರಿಕೆ ಕ್ರಮ-112 ವಿದ್ಯಾರ್ಥಿಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ

ಹಾಸನ ಜಿಲ್ಲೆಯಲ್ಲಿ ನಿರಂತರವಾಗಿ ವರದಿಯಾಗುತ್ತಿರುವ ಹೃದಯಾಘಾತದ ಪ್ರಕರಣಗಳ ನಡುವೆ, ಮಕ್ಕಳಲ್ಲಿ ಹೃದಯ ತಪಾಸಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಈಗಾಗಲೇ 56,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಲಾಗಿದೆ.