ಬೆಂಗಳೂರು, ಸೆ.24: ಹೆಟೆರೊ ಹೆಲ್ತ್ ಕೇರ್ ಲಿಮಿಟೆಡ್ ಮಾರುಕಟ್ಟೆಗೆ ಕ್ಯಾನ್ಸರ್ ಚಿಕಿತ್ಸೆಯ ಹೊಸ ಔಷಧ ‘ಪೆರ್ಜೆಟಾ’ (Perjeta) ಬಿಡುಗಡೆ ಮಾಡಿದೆ. ಈ ಔಷಧವು ಮುಖ್ಯವಾಗಿ ಸ್ತನ ಕ್ಯಾನ್ಸರ್ ರೋಗಿಗಳಿಗೆ ಉಪಯುಕ್ತವಾಗಲಿದೆ ಎಂದು ಕಂಪನಿಯವರು ತಿಳಿಸಿದ್ದಾರೆ.
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿರುವ ಎಂಜೀನ್ ಬಯೋಸೈನ್ಸಸ್ ಲಿಮಿಟೆಡ್ನ ಸಹಭಾಗಿತ್ವದಲ್ಲಿ ಈ ಔಷಧವನ್ನು ಅಭಿವೃದ್ಧಿಪಡಿಸಲಾಗಿದೆ. ಹೆಟೆರೊ ಹೆಲ್ತ್ ಕೇರ್ ಈ ಮೂಲಕ ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತಿರುವುದು ಗಮನಾರ್ಹವಾಗಿದೆ.
ಆರೋಗ್ಯ ತಜ್ಞರು ಮತ್ತು ರೋಗಿಗಳಿಗೆ ಈ ಔಷಧ ಲಭ್ಯವಾಗುವ ಮೂಲಕ ಸ್ತನ ಕ್ಯಾನ್ಸರ್ ನಿರ್ವಹಣೆಯಲ್ಲಿ ಹೊಸ ಆಯಾಮ ಸಾದ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
