ಹೇಮಾವತಿ ಆಸ್ಪತ್ರೆನಲ್ಲಿ ಇದೀಗ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನದಿಂದ ಮೊಣಕಾಲು ಬದಲಿ (Knee Replacement) ಶಸ್ತ್ರಚಿಕಿತ್ಸೆ ಪ್ರಪ್ರಥಮವಾಗಿ ಆರಂಭಗೊಂಡಿದ್ದು, ಹಾಸನ ಜಿಲ್ಲೆಯ ಜನತೆಗೆ ಮಹತ್ವದ ಆರೋಗ್ಯ ಸೌಲಭ್ಯ ಒದಗಿಸಲಾಗಿದೆ. ಇದರಿಂದ ಬೆಂಗಳೂರು, ಮೈಸೂರು ಸೇರಿದಂತೆ ದೊಡ್ಡ ನಗರಗಳಿಗೆ ಹೋಗಬೇಕಾದ ಅವಶ್ಯಕತೆ ಕಡಿಮೆಯಾಗಿದ್ದು, ಸ್ಥಳೀಯವಾಗೇ ಉನ್ನತ ಮಟ್ಟದ ಚಿಕಿತ್ಸೆ ದೊರಕುತ್ತಿರುವುದು ಸಂತಸದ ಸಂಗತಿ.
ಸಾಮಾನ್ಯವಾಗಿ ಜನರಲ್ಲಿ 50–60 ವರ್ಷದ ನಂತರ ಜಾಯಿಂಟ್ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಆರಂಭದಲ್ಲಿ ಮಾತ್ರೆಗಳು, ಫಿಜಿಯೋಥೆರಪಿ ಮುಂತಾದ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಎಕ್ಸ್ರೇ ಪರೀಕ್ಷೆಯಲ್ಲಿ ಮಂಡಿ ಸವೆತ (Joint degeneration) ಕಂಡುಬಂದರೆ ವೈದ್ಯರು ನೀ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಯನ್ನು ಮಾಡಿಸುವಂತೆ ಸಲಹೆ ನೀಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿರುವ ವಿವಿಧ ರೀತಿಯ ಜಾಯಿಂಟ್ ಸಮಸ್ಯೆಗಳೆಂದರೇ:-
- ಅಸ್ಥಿರಜ್ಜು (Osteoarthritis)
ವಯಸ್ಸು ಹೆಚ್ಚಾದಂತೆ ಸಂಧಿಯಲ್ಲಿನ ಕಾರ್ಟಿಲೇಜ್ ಸವೆತೆದ ನೋವು, ಕಠಿಣತೆ ಮತ್ತು ಊತ ಉಂಟಾಗುವುದು. ಮೊಣಕಾಲು ಮತ್ತು ಹಿಪ್ನಲ್ಲಿ ಹೆಚ್ಚು, ನೋವು ಕಾಣಿಸಿಕೊಳ್ಳುತ್ತದೆ. - ರುಮಾಟಾಯ್ಡ್ ಆರ್ಥ್ರಿಟಿಸ್ (Rheumatoid Arthritis)
ದೇಹದ ರೋಗನಿರೋಧಕ ವ್ಯವಸ್ಥೆ ಸಂಧಿಗಳ ಮೇಲೆ ದಾಳಿ ಮಾಡುವುದರಿಂದ ಕೈ ಬೆರಳುಗಳು, ಮೊಣಕಾಲುಗಳು, ಮಣಿಕಟ್ಟುಗಳಲ್ಲಿ ಉರಿಯೂತ ಕಾಣಿಸಬಹುದು. - ಗೌಟ್ (Gout)
ಯೂರಿಕ್ ಆಸಿಡ್ ಹೆಚ್ಚಾದಾಗ ಸಂಧಿಗಳಲ್ಲಿ ಕ್ರಿಸ್ಟಲ್ಗಳು ಜಮೆಯಾಗುವುದರಿಂದ ತೀವ್ರ ನೋವು ಉಂಟಾಗುತ್ತದೆ. ಸಾಮಾನ್ಯವಾಗಿ ಇಂಥಹ ಸಮಸ್ಯೆಗಳು ಕಾಲಿನ ದೊಡ್ಡ ಬೆರಳಲ್ಲಿ ಕಾಣುತ್ತದೆ.
- ಬರ್ಸೈಟಿಸ್ (Bursitis)
ಸಂಧಿಗಳ ಬಳಿ ಇರುವ ದ್ರವ ತುಂಬಿದ ಚೀಲ (Bursa) ಉರಿಯುವುದರಿಂದ ಭುಜ, ಮೊಣಕಾಲು, ಮೊಣಕೈಗಳಲ್ಲಿ ಸಾಮಾನ್ಯ ನೋವು ಉಂಟಾಗುವುದು. - ಲಿಗಮೆಂಟ್ ಗಾಯ (Ligament Injury)
ಕ್ರೀಡೆ ಅಥವಾ ಅಪಘಾತಗಳಿಂದ ಸಂಧಿ ಬಂಧನಗಳು (Ligaments) ಹಾನಿಯಾಗುವುದು. ಉದಾಹರಣೆ: ಮೊಣಕಾಲಿನ ACL ಗಾಯ. - ಕಾರ್ಟಿಲೇಜ್ ಹಾನಿ (Cartilage Damage)
ಗಾಯದಿಂದ ಸಂಧಿಯ ರಕ್ಷಕ ಪದರ ಹಾನಿಯಾಗುವುದು.
- ಜಂಟಿ ಉರಿಯೂತ (Joint Inflammation / Synovitis)
ಜಂಟಿಯ ಒಳಭಾಗದಲ್ಲಿ ಉರಿಯೂತದಿಂದ ನೋವು ಮತ್ತು ಊತ ಉಂಟಾಗುವುದು.


ಪರಿಹಾರಗಳು:-
- ವ್ಯಾಯಾಮ ಮತ್ತು ಫಿಜಿಯೋಥೆರಪಿ
- ಔಷಧ ಚಿಕಿತ್ಸೆ (Pain killer, anti-inflammatory)
- ಜೀವನಶೈಲಿ ಬದಲಾವಣೆ (ತೂಕ ನಿಯಂತ್ರಣ, ಆರೋಗ್ಯಕರ ಆಹಾರ)
- ಜಂಟಿ ಬದಲಾವಣೆ ಶಸ್ತ್ರಚಿಕಿತ್ಸೆ
ರೋಬೋಟಿಕ್ ನೀ ರಿಪ್ಲೇಸ್ಮೆಂಟ್ ಹೇಗೆ ಕಾರ್ಯನಿರ್ವಹಿಸುತ್ತದೆ?
1. ಪೂರ್ವ ಯೋಜನೆ (Prior planning) – ಸಿಟಿ ಸ್ಕ್ಯಾನ್ ಮೂಲಕ ಜಾಯಿಂಟ್ನ 3D ಮಾದರಿ ತಯಾರಿಸಲಾಗುತ್ತದೆ.
2. ಇಂಟ್ರಾ ಆಪರೇಟಿವ್ ಮ್ಯಾಪಿಂಗ್ (Intraoperative mapping)– ಶಸ್ತ್ರಚಿಕಿತ್ಸೆ ಸಮಯದಲ್ಲಿ ನಿಖರ ಮ್ಯಾಪಿಂಗ್.
3. ನಿಖರ ಕಾರ್ಯ ನಿರ್ವಹಣೆ (Precise task management) – ರೋಬೋಟಿಕ್ ಸಹಾಯದಿಂದ ನಿಖರ ಮೂಳೆ ಕಡಿತ ಮತ್ತು ಇಂಪ್ಲಾಂಟ್ ಅಳವಡಿಕೆ.
ರೋಬೋಟಿಕ್ ಶಸ್ತ್ರಚಿಕಿತ್ಸೆಯ ಪ್ರಮುಖ ಪ್ರಯೋಜನಗಳು:-
- ಹೆಚ್ಚು ನಿಖರತೆ (Accuracy)
- ಕಡಿಮೆ ನೋವು ಮತ್ತು ಕಡಿಮೆ ರಕ್ತಸ್ರಾವ (Less pain and less bleeding)
- ಮಿನಿಮಲಿ ಇನ್ವ್ಯಾಸಿವ್ ವಿಧಾನ (A minimally invasive procedure )
- ವೇಗವಾಗಿ ಚೇತರಿಕೆ (Fast recovery )
- ಉತ್ತಮ ಜಂಟಿ ಚಲನೆ ಮತ್ತು ಸ್ಥಿರತೆ ( Better joint movement and stability )

ವೇಗದ ರಿಕವರಿ ಪ್ರಕ್ರಿಯೆ (Recovery process):-
ರೋಗಿಗೆ ಶಸ್ತ್ರಚಿಕಿತ್ಸೆಯ ನಂತರ ಸುಮಾರು 10 ಗಂಟೆಗಳೊಳಗೆ ಫಿಸಿಯೋಥೆರಪಿ ಆರಂಭಿಸಲಾಗುತ್ತದೆ. ಇದನ್ನು ರಾಪಿಡ್ ರಿಹ್ಯಾಬ್ ಪ್ರೊಸೆಸ್ ಎಂದು ಕರೆಯಲಾಗುತ್ತದೆ.
ಸಾಮಾನ್ಯವಾಗಿ:
- 2 ದಿನಗಳಲ್ಲಿ ಡಿಸ್ಚಾರ್ಜ್
- 15 ದಿನಗಳಲ್ಲಿ ಹೊಲಿಗೆ ತೆಗೆಯುವುದು
- ಎರಡು ಮೂರು ದಿನಗಳಲ್ಲೇ ವಾಕರ್ ಇಲ್ಲದೆ ನಡೆಯಬಹುದು.
- ಮೆಟ್ಟಿಲು ಹತ್ತುವುದು-ಇಳಿಯುವುದು ಸಾಧ್ಯ
- 3 ತಿಂಗಳಲ್ಲಿ ಸಂಪೂರ್ಣ ಚೇತರಿಕೆ ಸಾಧ್ಯ
ಸರಿಯಾದ ವ್ಯಾಯಾಮ ಮಾಡಿದರೆ 20–25 ವರ್ಷಗಳವರೆಗೆ ಉತ್ತಮ ಫಲಿತಾಂಶ ದೊರೆಯಬಹುದು ಎಂದು ವೈದ್ಯರು ತಿಳಿಸಿದ್ದಾರೆ.
Watch Video: ಸರ್ಜರಿ ಮೊದಲು ಹಾಗೂ ಸರ್ಜರಿ ನಂತರ
ವೈದ್ಯರ ಅಭಿಪ್ರಾಯ:-

ಹೇಮಾವತಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ನಿಖಿಲ್ ರಾಮಕೃಷ್ಣ ಭಟ್ ಅವರ ಪ್ರಕಾರ, ಪ್ರಪಂಚದಲ್ಲಿ ಅತ್ಯಧಿಕವಾಗುವ ಶಸ್ತ್ರಚಿಕಿತ್ಸೆಗಳಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಯ ನಂತರ ನೀ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಎರಡನೇ ಸ್ಥಾನದಲ್ಲಿದೆ. ಒಂದು ಕಿಲೋಮೀಟರ್ ನಡೆಯಲು ಆಗದವರು ಕೂಡ ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಸಾಮಾನ್ಯ ಜೀವನಕ್ಕೆ ಮರಳಬಹುದು ಎಂದು ಅವರು ತಿಳಿಸಿದ್ದಾರೆ.
ಡಾ. ನಿಖಿಲ್ ಭಟ್ ಅವರು ಮೈಸೂರಿನ JSS ಮೆಡಿಕಲ್ ಕಾಲೇಜುನಲ್ಲಿ ಎಂಬಿಬಿಎಸ್ ಹಾಗೂ ಮಂಗಳೂರಿನ Nitte K.S. ಹೆಗ್ಡೆ ಮೆಡಿಕಲ್ ಕಾಲೇಜುನಲ್ಲಿ ಎಂ.ಎಸ್ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ನಂತರ ಹೈದರಾಬಾದ್ನ Apollo Health City ಹಾಗೂ ಸಿಂಗಾಪುರದ Singapore General Hospitalನಲ್ಲಿ ನೀ ಜಾಯಿಂಟ್ ರಿಪ್ಲೇಸ್ಮೆಂಟ್ ಫೆಲೋಶಿಪ್ ನಲ್ಲಿ ಪರಿಣಿತಿ ಹೊಂದಿದ್ದಾರೆ. ಇಂದಿಗೂ ಅವರು ಬೆಂಗಳೂರಿನ Manipal Hospitalನಲ್ಲಿ ವಿಸಿಟಿಂಗ್ ವೈದ್ಯರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
2017ರಿಂದ ಹೇಮಾವತಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವರ್ಷಕ್ಕೆ ಸುಮಾರು 100ಕ್ಕೂ ಹೆಚ್ಚು ನೀ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದ್ದು, ನೂರಾರು ಜನರ ಬದುಕಿಗೆ ಬೆಳಕಾಗಿದ್ದಾರೆ.
Watch Video: ಫುಲ್ಲಿ ಆಟೋನೋಮಸ್ ರೋಬೋಟಿಕ್ ಸರ್ಜರಿ ಬಗ್ಗೆ ಮಾಹಿತಿ
ಅನುಭವಿಗಳ ಅಭಿಪ್ರಾಯ:-

ಹಾಸನದಲ್ಲಿ 1986ರಿಂದ ಮೂಳೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಮಕೃಷ್ಣ ಭಟ್ಅವರ ಪ್ರಕಾರ, ಹಿಂದೆ ಉತ್ತಮ ವೈದ್ಯಕೀಯ ಸೌಲಭ್ಯಗಳ ಕೊರತೆ ಇತ್ತು. ಆದರೆ ಈಗ ಮೆಟ್ರೋ ನಗರಗಳಲ್ಲಿ ಸಿಗುವ ಮಟ್ಟದ ಚಿಕಿತ್ಸೆ ಹಾಸನದಲ್ಲಿಯೇ ಲಭ್ಯವಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹೇಮಾವತಿ ಆಸ್ಪತ್ರೆಯಲ್ಲಿ ಫುಲ್ಲಿ ಆಟೋನೋಮಸ್ ರೋಬೋಟಿಕ್ ಸರ್ಜರಿ (Fully Autonomous Robotic Surgery) ಪರಿಚಯಿಸಿರುವುದು ಜಿಲ್ಲೆಯಲ್ಲೇ ಪ್ರಥಮವಾಗಿದೆ ಎಂದು ಅವರು ಹೇಳಿದ್ದಾರೆ.
ಜನತೆಗೆ ವರದಾನ:-

ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಜನರಿಗೆ ಕಡಿಮೆ ವೆಚ್ಚದಲ್ಲಿ, ಹೆಚ್ಚು ನಿಖರತೆ ಹೊಂದಿರುವ ರೋಬೋಟಿಕ್ ನೀ ರಿಪ್ಲೇಸ್ಮೆಂಟ್ ಸೌಲಭ್ಯ ದೊರೆಯುತ್ತಿರುವುದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
