ತುಮಕೂರು :- ಗ್ರಾಮದ ನೈರ್ಮಲ್ಯ ಕಾಪಾಡಲು ಸಿಸಿ ಚರಂಡಿ ಮತ್ತು ರಕ್ಷಣಾ ಗೋಡೆ ನಿರ್ಮಾಣ ಅಗತ್ಯವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಹೇಳಿದರು.
ತುಮಕೂರು ತಾಲೂಕಿನ ಊಡಿಗೆರೆ ಹೋಬಳಿಯ ಸೀತಕಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿನಾಯಕ ನಗರ, ಹಿರೇ ದೊಡ್ಡವಾಡಿ, ಗುಂಡಿನ ಪಾಳ್ಯ, ಮುಖ್ಯರಸ್ತೆಯ ಪಕ್ಕದಲ್ಲಿ ಸಿಸಿ ಚರಂಡಿ ಮತ್ತು ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಯು ಒಂದು ಕೋಟಿ ವೆಚ್ಚದಲ್ಲಿ ಸಿ.ಸಿ. ಚರಂಡಿ ಮತ್ತು ರಕ್ಷಣಾ ಗೋಡೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಸೀತಕಲ್ಲು ಗ್ರಾಮದ ಪಕ್ಕ ಬೋವಿ ಪಾಳ್ಯದ ಬಯಲು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಐಪಿ ಸೆಟ್ ವಿದ್ಯುತ್ ಸಂಪರ್ಕ ಮಾತ್ರ ಇದೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ತೊಂದರೆಯಾಗುತ್ತಿದೆ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕೆಲವೇ ದಿನಗಳಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭವಾಗುತ್ತಿದೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಸೌಮ್ಯ , ಉಪಾಧ್ಯಕ್ಷ ಕುಮಾರ್, ಹಾಗೂ ಸದಸ್ಯರು ಸೇರಿದಂತೆ, ಬಿಜೆಪಿ ಮುಖಂಡರಾದ ನಾಗರಾಜು, ಮಾಜಿ ತಾಲೂಕು ಪಂಚಾಯತ್ ಸದಸ್ಯ ರವಿಕುಮಾರ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೃಷ್ಣಮೂರ್ತಿ ಹಾಗೂ ಸಿದ್ದಲಿಂಗಯ್ಯ, ಮುಖಂಡರುಗಳಾದ ಹನುಮಂತರಾಯಪ್ಪ, ಟೀ ಅಂಗಡಿ ಪ್ರಕಾಶ್,ಚಂದ್ರಶೇಖರ್ ರಾವ್,ಉಮಾಶಂಕರ್, ಶ್ರೀನಿವಾಸ್,ಭೀಮರಾಜು, ದಯಾನಂದ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ- ಮನು ಚಿನ್ನಹಳ್ಳಿ
