ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಪ್ರಕಟಣೆಯ ಮೂಲಕ ಸ್ಥಳೀಯರು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಕೆಲವು ನಿವಾಸಿಗಳು ರಸ್ತೆಗಳಲ್ಲಿ ಜೋಳ, ಬತ್ತದ ಹುಲ್ಲು, ಹುರುಳಿಕಾಳು ಸೊಪ್ಪು ಹಾಕುತ್ತಿದ್ದು, ಇದರಿಂದ ಬೈಕ್ ಹಾಗೂ ಇತರ ವಾಹನಗಳಿಗೆ ತೊಂದರೆ ಉಂಟಾಗಿ ಅಪಘಾತಗಳು ಮತ್ತು ಬೆಂಕಿ ಅಪಾಯಗಳು ಸಂಭವಿಸುತ್ತಿವೆ.
ಸೂಚನೆ:
ಗ್ರಾಮದ ರಸ್ತೆಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಯಾವುದೇ ರೀತಿಯ ಜೋಳ, ಬತ್ತದ ಹುಲ್ಲು, ಹುರುಳಿಕಾಳು ಸೊಪ್ಪು ಹಾಕಬಾರದು.
ಈ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕರ ರಕ್ಷಣೆಗಾಗಿ ಎಲ್ಲರು ಈ ನಿಯಮವನ್ನು ಪಾಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
