ಕೊರಟಗೆರೆ;- ಕೊರಟಗೆರೆ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ 50 ಕೋಟಿ ಅನುದಾನ ತಂದು ರಾಜ್ಯಕ್ಕೆ ಮಾದರಿ ಕ್ಷೇತ್ರ ಮಾಡುವುದೇ ನನ್ನ ಮೊದಲ ಅಧ್ಯತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಶಾಂತಲಿಂಗಯ್ಯನಪಾಳ್ಯ ಗ್ರಾಮದ ಮುಖ್ಯ ರಸ್ತೆಗೆ ಸುಮಾರು 60 ಲಕ್ಷದ ಕಾಮಗಾರಿ ಉದ್ಘಾಟಿಸಿ ಹಾಗೂ ಬಿ.ಡಿ.ಪುರ ಗ್ರಾಮದಲ್ಲಿ 40 ಲಕ್ಷ ರೂಗಳ ಗ್ರಾಪಂ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೊರಟಗೆರೆ ಕ್ಷೇತ್ರದಲ್ಲಿ ಹಲವು ಗ್ರಾಮಗಳಲ್ಲಿ ದಶಕಗಳಿಂದ ರಸ್ತೆಗಳು ಅಭಿವೃದ್ದಿ ಹೊಂದಿಲ್ಲ ಎನ್ನವ ಗ್ರಾಮಸ್ಥರ ಬೇಡಿಕೆಗಳಿಗೆ ಮುಖ್ಯಮಂತ್ರಿಗಳಿಂದ 50 ಕೋಟಿಗಳ ವಿಶೇಷ ಅನುದಾನದಲ್ಲಿ ಗ್ರಾಮಗಳ ಮೂಲಭೂತ ಸೌಕರ್ಯಗಳನ್ನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ವರ್ಷ 50 ಕೋಟಿಗಳನ್ನ ಪೂರೈಸಿ ಮುಂಬರುವ ದಿನಗಳಲ್ಲಿ ಮತ್ತೆ 50 ಕೋಟಿ ರೂ ಅನುದಾನ ಪಡೆದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗವುದು ಎಂದರು.
ತಾಲೂಕಿನ ಜನರ ಬೇಡಿಕೆಯಂತೆ ಈಗಾಗಲೇ ತೋವಿನಕೆರೆ ಹೋಬಳಿ ಕೇಂದ್ರದಲ್ಲಿ 36 ಕೋಟಿ ವ್ಯಚ್ಚದಲ್ಲಿ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಅಭಿವೃದ್ಧಿ ಪಡಿಸಲಾಗುತ್ತಿದ್ದು. ಶೀಘ್ರದಲ್ಲಿ ಉದ್ಘಾಟಿಸಲಾಗವುದು, ಅದೆ ರೀತಿ ಕೊರಟಗೆರೆ ಪಟ್ಟಣದಲ್ಲಿ ಬೇಡಿಕೆಯಂತೆ 32 ಕೋಟಿ ರೂಗಳ ವ್ಯೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆಗೆ ಅಡಿಗಲ್ಲು ಹಾಕಲಾಗುವುದು, ಹಾಗೂ ಕೋಳಾಲ ಹೋಬಳಿ ಕೇಂದ್ರದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ವಿಶೇಷ ಅನುದಾನವನ್ನು ಮುಂಬರುವ ಆಯಾವ್ಯಯಾದಲ್ಲಿ ಸೇರಿಸುವಂತೆ ಮುಖ್ಯಮಂತ್ರಿಗಳನ್ನ ಕೋರಲಾಗವುದು, ಕ್ಷೇತ್ರದ ಜನರ ಆರೋಗ್ತದ ದೃಷ್ಠಿಯಿಂದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಎಂದು ತಿಳಿಸಿದರು.
ಕೊರಟಗೆರೆ ಪಟ್ಟಣ ಪಂಚಾಯ್ತಿಯನ್ನ ಪುರಸಭೆಯನ್ನಾಗಿ ಮೇಲ್ದೇರ್ಜೆಗೆ ಏರಿಸಲಾಗಿದ್ದು, ಪಟ್ಟಣದ ಬೆಳವಣಿಗೆಗೆ ಸುತ್ತಮುತ್ತಲ ಗ್ರಾಮಗಳನ್ನ ಸೇರಿಸಿಕೊಂಡು ಪುರಸಭೆಯನ್ನಾಗಿ ಊರಿನ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ಬರುವಂತೆ ಮಾಡಲಾಗುತ್ತಿದೆ. ಪಟ್ಟಣವು ಅತ್ಯಂತ ಇಕ್ಕಟ್ಟಾದ ಪ್ರದೇಶದಲ್ಲಿ ಜನರು ವಾಸುತ್ತಿದ್ದು, ಈ ಬೆಳವಣಿಗೆಯಿಂದ ಸುತ್ತಮುತ್ತಲ ಪ್ರದೇಶವು ವಾಸ ಸ್ಥಳಕ್ಕೆ ಅಭಿವೃದ್ದಿಗೊಂಡು ಮೂಲಭೂತ ಸೌಕರ್ಯ ಹೆಚ್ಚುವುದಾಗಿ ತಿಳಿಸಿದರು.
ಇದೆ ಸಂದರ್ಭದಲ್ಲಿ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮಧುಗಿರಿ ಎಸಿ ಶಿವಪ್ಪ ಗೋಟ್ಟೂರು, ತಹಸೀಲ್ದಾರ್ ಮಂಜುನಾಥ್, ಇ.ಓ ಅಪೂರ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಡ್ಲಹಳ್ಳಿ ಆಶ್ವಥ್ನಾರಾಯಣ್, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ ಗ್ರಾಪಂ ಅಧ್ಯಕ್ಷೆ ಸೌಮ್ಯ, ಪಿಡಿಒ ಲಕ್ಷ್ಮೀನಾರಾಯಣ್, ಮುಖಂಡರಾದ ಎಲ್. ರಾಜಣ್ಣ, ಕವಿತಮ್ಮ, ದೇವರಾಜು, ಜಯರಾಮು, ಮಹಾಲಿಂಗಪ್ಪ, ರವಿಕುಮಾರ್, ಹನುಮಂತರಾಜು, ಅಟಿಕನಾಗರಾಜು, ಸೇರಿದಂತೆ ಇತರರು ಹಾಜರಿದ್ದರು.
