ನಾನು ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯದ ಮೊದಲ ಮೆಟ್ಟಲೇರಿದ ದಿನಗಳು. ಮೊದಲನೆ ಎಂ ಬಿ ಬಿ ಎಸ್ ಪರೀಕ್ಷೆ ನಮಗೆ ಒಂದುವರೆ ವರ್ಷದ ನಂತರ ಇದ್ದಿದ್ದರಿಂದ ಓದುವುದಕ್ಕೆ ಅಂತಹ ಒತ್ತಡ ಇರಲಿಲ್ಲ. ಆದುದರಿಂದ ಅಲ್ಪ ಖುಷಿ ಮತ್ತು ಬೆಟ್ಟದಷ್ಟು ಓದು. ನಾವು ಓದುತ್ತಿದ್ದಾಗ ಮೊದಲನೆ ವರ್ಷದಲ್ಲಿ ಎರಡೇ ವಿಷಯ. ಅಂಗರಚನಾ ಶಾಸ್ತ್ರ ಮತ್ತು ಶರೀರ ಶಾಸ್ತ್ರ.
ಶರೀರ ಶಾಸ್ತ್ರದ ಒಳಗೆ ನಾವು ಜೀವರಸಾಯನ ಶಾಸ್ತ್ರ ಓದಬೇಕಿತ್ತು. ಕೆಲವರಿಗಂತು ಈ ವಿಷಯ ಒಣ ವಿಷಯ. ಈ ಕಾರಣದಿಂದ ಕೆಲ ವೈದ್ಯ ವಿದ್ಯಾರ್ಥಿಗಳು ಈ ವಿಷಯದಲ್ಲಿ ಅನುತ್ತೀರ್ಣರಾಗುತ್ತಾರೆ. ನನಗೂ ಸಹ ಈ ವಿಷಯ ಸುಲಭವಾಗಿ ಇರಲಿಲ್ಲ. ಕಷ್ಟ ಪಟ್ಟು ಓದಲೇ ಬೇಕಿತ್ತು. ಪ್ರಯೋಗಾಲಯದಲ್ಲಿ ತಪ್ಪು ಮಾಡಿದರೆ ನಮ್ಮ ಪ್ರಯೋಗಾಲಯ ಉಪನ್ಯಾಸಕರಿಂದ ನನ್ನ ಅಂಗಿಯ ಮೇಲೆ ಶಾಹಿಯನ್ನು ಸಿಂಪಡಿಸಿಕೊಳ್ಳಬೇಕಿತ್ತು. ಇದ್ದಿದ್ದು ಎರಡು ಮೂರು ಜೊತೆ ಷರ್ಟುಗಳು.
ನನಗೆ ಕಳುಹಿಸುತ್ತಿದ್ದ ಹಣ ನೂರಾ ನಲವತ್ತು ರೂಪಾಯಿಗಳು. ಇದರಲ್ಲೇ ಭೋಜನ ಮತ್ತು ಪುಸ್ತಕಗಳ ಕರ್ಚು ಆಗಬೇಕಿತ್ತು. ಉಳಿದ ಹಣ ಸಾಯಂಕಾಲದ ಚಹಾದ ಕರ್ಚಿಗೆ. ಆದುದರಿಂದ ನನಗೆ ಉತ್ತಿರ್ಣ ಆಗುವುದು ಅನಿವಾರ್ಯವಾಗಿತ್ತು. ನಾವು ರೈತಾಪಿ ಕುಟುಂಬದಿಂದ ಬಂದಿರುವುದರಿಂದ ಎಲ್ಲಾ ರೈತರ ಮನೆಯಂತೆ ನಮಗೂ ಆರ್ಥಿಕ ಸಂಕಷ್ಟ ಎದುರಿಸಬೇಕಿತ್ತು. ಇದು ನನ್ನ ಕಥೆ ಆದರೆ ಅಂದು ಓದಿದ್ದ ಇಂಗಾಲದ ಷಟ್ಕೋನ ವಿನ್ಯಾಸ ಈಗಷ್ಟೇ ಅಧ್ಯಾತ್ಮಿಕ ಚಿಂತಕನಾದ ನನಗೆ ಜ್ಞಾಪಕಕ್ಕೆ ಬಂದಂತಾದ್ದು.

ವೇದಗಳನ್ನು ಕುರಿತು ಪುಟಗಳ ಹಾಳೆಗಳನ್ನು ತಿರುಚಿತ್ತಿದ್ದಾಗ “ಋಗ್ವೇದ” ದಲ್ಲಿ ಬರುವಂತಹ “ಮಧು” ಅಥವ “ಜೇನುತುಪ್ಪ”, ಅಂದರೆ, ಜೇನುನೊಣಗಳ ಗೂಡಿನ ವಿನ್ಯಾಸ ಇಂಗಾಲದ ರಸಾಯನಿಕ ವಿನ್ಯಾಸ ಎರಡು ಒಂದೇ ತರಹ ಇದೆಯಲ್ಲಾ ಎಂದುಕೊಂಡೆ. ನನ್ನ ಮನಸ್ಸು ಈ ಎರಡು ವಿನ್ಯಾಸ ರಚನೆಗಳ ರಹಸ್ಯದ ಹಿನ್ನೆಲೆಗೆ ಕೊಂಡು ಹೋಯಿತು. ಈ ಹೋಲಿಕೆ ನನ್ನ ಕುತೂಹಲಕ್ಕೆ ಕಾರಣವಾಯಿತು. ಸಾವಿರಾರು ವರ್ಷಗಳ ಹಿಂದೆ ಋಷಿ ಮುನಿಗಳಿಗೆ ಯಾವುದೇ ತರಹದ ಪ್ರಯೋಗಾಲಯಗಳು ಇರಲಿಲ್ಲ. ಆದರೆ ಅಂದು ಋಷಿವರ್ಯರು ಮಾನವನ ರಚನಾ ಪ್ರಬಂಧಕವನ್ನು “ಮಧು” ಕುರಿತು ಮಂಡಿಸಿರುವುದು ನನಗೆ ಆಶ್ಚರ್ಯ ತಂದಿತು.
ಪೌರಾಣಿಕವಾಗಿ “ಕೃಷ್ಣ” ನನ್ನು ಸಂಭೋಧಿಸಿದಾಗ “ಮಾಧವ” ಎಂಬ ನಾಮಧೇಯದಿಂದ ಕರೆಯುತ್ತಾರೆ. ಮಾಧವ ಪದ ಪೃಥ್ವಿ ಮತ್ತು ದೈವತ್ವದ ಸಮಾನಾಂತರ ಪದ. ಸಂಸ್ಕೃತದಲ್ಲಿ “ಧವ” ಎಂದರೆ “ಗಂಡ” ಎಂದರ್ಥ. “ಮಾ” ಅಂದರೆ ಮಾತೆ. ಮಾತೆಯ ಗಂಡ ಮಾಧವ. ಸ್ವಲ್ಪ ಬಿಡಿಸಿ ಹೇಳಬೇಕಂದರೆ, ಸುಮಂಗಳೆಯನ್ನು “ಸಧವ” ಅಂತಲೂ ಗಂಡ ಕಳೆದುಕೊಂಡ ಹೆಂಗೆಳೆಯನ್ನು “ವಿಧವ” ಎಂದು ಕರೆಯುತ್ತಾರೆ. ಪ್ರಯಾಗ್ ರಾಜ್ ಸ್ಥಳದಲ್ಲಿ ದ್ವಾಧಶ (ಹನ್ನೆರೆಡು) ಮಾಧವರು ನೆಲೆಸಿದ್ದಾರೆ ಎನ್ನಲಾಗಿದೆ. ತ್ರಿವೇಣಿ ಸಂಗಮದ “ವೇಣಿಮಾಧವ”, ಸಂಗಮವನ್ನು ರಕ್ಷಿಸುತ್ತಿದ್ದಾನೆ ಎನ್ನುವುದು ಅಲ್ಲಿಯ ಪ್ರಜೆಗಳ ನಂಬಿಕೆ.
ಷಟ್ಕೋನ ಜೇನುಗೂಡುಗಳಲ್ಲಿ ಅಮೃತ ಶ್ರೇಷ್ಠ ಮಧುವನ್ನು ಶೇಖರಿಸಿದ ಜೇನು, ಜೇನುನೊಣಗಳಿಗೆ ಅಲ್ಲದೆ ಸವಿಯುವನಿಗೆ ಧಾರೆ ಎರೆಯುತ್ತವೆ. ಹಾಗೆಯೇ ಮಾನವನ ಪ್ರತಿಯೊಂದು ಅಂಶವೂ ಷಟ್ಕೋನ ತರಹದಲ್ಲೇ ವಿನ್ಯಾಸಗೊಂಡ ಇಂಗಾಲದಿಂದ ಕೂಡಿದ್ದಾಗಿರುತ್ತದೆ. ಆದುದರಿಂದಲೇ ಮಾನವನ ಜೀವರಸಾಯನದ ಕೆಲಸ ಕಾರ್ಯಗಳು ಈ ಇಂಗಾಲದ ಬಿಲ್ಲೆ (ಕಾರ್ಬನ್ ಚಿಪ್ – ವಂಶವಾಹಿನಿ) ಇರುವುದರಿಂದ ಅತ್ಯಂತ ನಿಖರವಾಗಿ ಆಗುತ್ತೆ ಎನ್ನುವುದು. ನಮ್ಮನ್ನು ಸೃಷ್ಟಿಸಿದ ಸೃಷ್ಟಿಕರ್ತನ ಉದ್ದೇಶ, ಪರರಿಗೆ ನಾವೆಲ್ಲಾ ಬದುಕಬೇಕು ಅಥವ ಜೇನಿನಂತೆ ಇರಬೇಕು ಎಂದು ವೇದಾಂತ ಹೇಳುತ್ತದೆ.

“ತಂತ್ರ” ದ ಮೂಲ ಉದ್ದೇಶವೂ ಇದೇ ಆಗಿರುತ್ತದೆ. ಉದ್ದೇಶಿತ ಮಾನವನನ್ನು ತಯಾರು ಮಾಡಬೇಕಾದರೆ ಸಂಸಾರವನ್ನು ಅಣಿಗೊಳಿಸಬೇಕು. ಇಂತಹ ಮಾನವ ಉತ್ಪನ್ನಗಳು ಹೇಗೆ ಸಾಧ್ಯ? “ಯಂತ್ರ” ದಿಂದ ಸಾಧ್ಯ. ಇಂತಹ ಸಂಸಾರ ಯಂತ್ರದ ಒಳಗೆ ಅಗತ್ಯವಿರುವ ವಸ್ತುಗಳನ್ನು ಹಾಕಬೇಕು. ಆ ವಸ್ತುಗಳೇ ಬೀಜಗಳು. ಒಂದು ಅಂಡಾಣು ಮತ್ತು ಇನ್ನೊಂದು ಧಾತು. ಇವುಗಳ ಮಿಲನವೇ ಮಿಥನೋತ್ಸವ ಅಥವ ತಂತ್ರ ಯೋಗ. ಯಂತ್ರದ ಮಧ್ಯದಲ್ಲಿ ಕಾಣಿಸಿಕೊಳ್ಳುವ ಬಿಂದು ಸಿದಾ ತ್ರಿಕೋನ ಮತ್ತು ಉಲ್ಟಾ ತ್ರಿಕೋನ ಮಿಲನಗಳ ಚಿಹ್ನೆಗಳಿಂದ ತಯಾರಾದಂತ ಜೀವ.
ನಾನು ಇಲ್ಲಿ ನಿರೂಪಿಸಿದ ವಿಚಾರಕ್ಕೆ ಅಪಾರ್ಥ ಬೇಡ. ನಾವು ಇಲ್ಲಿ ನೋಡಬೇಕಾಗಿರುವುದು ವಿಜ್ಞಾನ. ಬೈರವ ತಂತ್ರ ವಿಜ್ಞಾನದ ಸಾರಾ ಶಿವ ಮತ್ತು ಪಾರ್ವತಿಯ ಮಧ್ಯೆ ನೆಡೆದ ಪವಿತ್ರ ಐಕ್ಯಾ ಉತ್ಸವ. ಇಂತಹ ಉತ್ಸವಕ್ಕೆ ನಾನು ಸಹ ಸೇರಿದಂತೆ ಎಲ್ಲರೂ ಪಾಲುದಾರರು. ಮನ್ವಂತರ ತಯಾರಿಕೆಗಳಿಗೆ ಮನಸ್ಸಿನ ಮಂತ್ರವೆ ಮದ್ದು. ಯೋಗ ಮಂತ್ರಗಳಿಂದ ಜನಿಸಿದ “ಮನು” ಗಳು ದ್ವಾಪರ ಅಥವ ತ್ರೇತಾ ಯುಗದಲ್ಲಿ ವಾಸವಿದ್ದರೇನೂ ತಿಳಿಯದು. ಕಾಲ ಚಕ್ರ ಒಂದೇ ತರಹ ಇರುವುದಿಲ್ಲ. ಅಂದು ಮನು, ಇಂದು ಯಾರು ಮತ್ತು ಮುಂದೆ ಎಂಥವರು. ತಂತ್ರ ದೃಷ್ಟಾಂತದಲ್ಲಿ “ಚಕ್ರ” ದ ಚಿಹ್ನೆ ಮಹತ್ವವನ್ನು ಪಡೆದಿದೆ.

ಸರಳವಾಗಿ ಈ ಚಕ್ರ ವಿನ್ಯಾಸದ ಅರ್ಥ “ಹಿಂದಿನಿಂದ ಏನು ತಂದಿದ್ದೇನೆ, ಈಗ ಯಾವುದನ್ನು ಆರಿಸಿಕೊಳ್ಳುತ್ತೇನೆ ಮತ್ತು ಮುಂದೆ ಏನನ್ನು ತೆಗೆದುಕೊಂಡು ಹೋಗುತ್ತೇನೆ”. ಮಹಾ ಋಷಿ ಪತಂಜಲಿ ಅವರ ಕರ್ಮ ಸಿದ್ಧಾಂತ ಸೂತ್ರದಲ್ಲಿ ತಿಳಿಸಿರುವ ಸಾರಾಂಶ ಹೀಗಿದೆ “ನಾವು ಇಂದು ಒಳ್ಳೆಯದನ್ನೇ ಮಾಡಿದರೆ ಈ ಒಳ್ಳೆಯ ನಡುವಳಿಕೆ ಅಥವ ಯೋಚನೆ ನಮ್ಮ ವಂಶವಾಹಿನಿಗಳಲ್ಲಿ ಕೆತ್ತಲಾಗುತ್ತದೆ. ಕೆತ್ತಲ್ಪಟ್ಟ ಒಳ್ಳೆಯತನ ಸುಮಾರು ಐದು ತಲೆಮಾರು ದೂರ ಸಾಗುತ್ತದೆ. ಮುಂದೆ ಒಳ್ಳೆಯತನವೇ ಇಲ್ಲದಿದ್ದಾಗ ತನ್ನಷ್ಟಕ್ಕೆ ತಾನೆ ಅಳಿಸಿ ಹೋಗುತ್ತದೆ”.
ಬ್ರಿಟಿಷ್ ದೇಶದ ಪ್ರಾಣಿ ಶಾಸ್ತ್ರಜ್ಞ ಮತ್ತು ಜೀವ ಶಾಸ್ತ್ರಜ್ಞ ಎಂಭತ್ತು ಮೂರು ವರ್ಷಗಳ “ರೀಚರ್ಡ ಡಾಕಿನ್ಸ” ತಮ್ಮ ಸಂಶೋಧನೆಯಲ್ಲಿ ಮಹಾ ಋಷಿ ಪತಂಜಲಿ ಸೂತ್ರವನ್ನೇ ತೆರೆದಿಟ್ಟಿದ್ದಾರೆ. ನಮ್ಮ ದೈನಂದಿನ ನೆಡೆ, ಯೋಚನೆ, ನಡುವಳಿಕೆ ಎಲ್ಲವನ್ನು ಜೀವತಂತು ಎಂಬ ವಿಶ್ವಕೋಶದಲ್ಲಿ ಸ್ವಯಂ ಆಗಿ ಬರೆದಿಡುತ್ತಾ ಹೋಗುತ್ತೆ ಎನ್ನುವುದನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಆದುದರಿಂದ ತಂತ್ರದ ಮಹತ್ವ ಯಾವುದು ಎಂದರೆ ಯೋಗಾಸಕ್ತಿ ಮತ್ತು ಉತ್ತಮ ನಡೆ, ನುಡಿ ಮತ್ತು ನಡುವಳಿಕೆ.
ಭಾರತದ ಪ್ರಾಧ್ಯಾಪಕರಾಗಿದ್ದ ಐ ಕೆ ಟೈಮ್ನಿ (1898 – 1978) ಬರೆದಿರುವ ಪುಸ್ತಕ “ದ ಸೈನ್ಸ್ ಆಫ್ ಯೋಗ”, ಸಾಧನ ಪಾದ ಹದಿನೆಂಟನೆ ಸೂತ್ರ
“ಪ್ರಕಾಶಃ ಕ್ರಿಯಾ ಸ್ಥಿತಿಃ ಶೀಲಂ ಭೂತೇ ಇಂದ್ರಿಯ ತತ್ಮಾಕಮ್ ಭೋಗ ಅಪವರ್ಗಃ ಅರ್ಥ ಅಂ ಅರ್ಗಾತಾಂ ದ್ರಿಶ್ಯಂ…
ನಾವು ಯಾವುದೇ ಅವಸ್ಥೆಯಲ್ಲಿ ಇದ್ದರೂ ಭೌತಶಾಸ್ತ್ರದ ಅಧೀನದಲ್ಲೇ ಇರುತ್ತೇವೆ. ನಮಗೆ ಕಾಣಿಸಿಕೊಳ್ಳುವ ವಸ್ತು ಅರಿವು, ಕ್ರಿಯೆ ಮತ್ತು ಸ್ಥಿರತೆಯನ್ನು ಕಾಯ್ದುಕೊಂಡಿರುತ್ತದೆ. ಈ ಸ್ಥಿತಿ ನೇರವಾಗಿ ನಮ್ಮ ಮೂರು ಗುಣಗಳ (ಸತ್ವ, ರಜಸ್ ಮತ್ತು ತಮಸ್) ಆಧಾರದ ಅನ್ವಯ ಅನುಭವ ಆಗುತ್ತದೆ. ಅಂದರೆ “ನಮ್ಮ ಅರಿವಿನಿಂದ ವಸ್ತುವಿನ ಕ್ರಿಯೆ ಮತ್ತು ಸ್ಥಿತಿಗಳು ನಮ್ಮ ಇಂದ್ರಿಯ ಸಮ್ಮುಖದಲ್ಲಿ ಅರ್ಥವಾಗುತ್ತೆ ಅಥವ ಅನುಭವ ಆಗುತ್ತೆ. ಇಂತಹ ಅನುಭವಗಳಿಗೆ ಬೆಳಕಿನಿಂದ (ಪಾರ್ಟಿಕಲ್ಸ್ ಅಥವ ಕಣಗಳಿಂದ) ಮಾತ್ರ ಸಾದ್ಯ”. ..
ಈ ಅವಸ್ಥೆಯಿಂದ ತಿಳಿಯುವುದು “ಮನಸ್ಸು” ಸಹ ಬೌತಶಾಸ್ತ್ರದ ಅಂಗರಚನೆಯಂತೆ ಒಂದು ಲಘುಗಣಕ (ಲಾಗರಿಥಮ್)…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] “ಜೇನುಗೂಡು – ಯಂತ್ರಚಕ್ರ – ಪತಂಜಲಿ ̵… […]