ಹೊರನಾಡು : ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಇತ್ತೀಚೆಗೆ ನಡೆದ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಖಿಲ ಭಾರತ ನೃತ್ಯ ಹಾಗೂ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ವಿದುಷಿ ಡಾ. ಪಿ ಸ್ವಾತಿ ಭಾರದ್ವಾಜ್ ರವರ ತಂಡದೊಂದಿಗೆ ತನಿಷ್ಕಾ, ನಿಶ್ಚಲ, ಸ್ಪೂರ್ತಿ, ಗ್ರೀಷ್ಮಾ, ಆರಾಧ್ಯ, ಸ್ಪಂದನ, ಹಿತಾನ್ಯ ಸೇರಿ ಎರಡು ಗಂಟೆಗಳ ಕಾಲ ನಿರಂತರ ಶ್ರೀ ಅನ್ನಪೂರ್ಣೇಶ್ವರಿಯ ಪಾದದಲ್ಲಿ ಸೇವೆ ಮಾಡುವ ಮೂಲಕ ನೃತ್ಯ ಪ್ರದರ್ಶನ ನೀಡಿದರು ಇದೇ ಸಂದರ್ಭದಲ್ಲಿ ಡಾ. ಸ್ವಾತಿ ತನ್ನ 1133 ನೇ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನು ಯಶಸ್ವಿಗೊಳಿಸಿಕೊಂಡರು ಬಂದಂತಹ ಎಲ್ಲಾ ಕಲಾವಿದರಿಗೂ ವಿಶೇಷವಾಗಿ ಅಮ್ಮನವರ ದರ್ಶನ ಮಾಡಿಸಿ ಶ್ರೀ ಕ್ಷೇತ್ರದಿಂದ ಗೌರವಿಸಿದರು
ವರದಿ : ಐ ಕೆ ಮಂಜುನಾಥ್

[…] […]