
ಹಾಡ ಹಗಲೇ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ
ಹಾಸನ ಜಿಲ್ಲೆಯಲ್ಲಿ ಹಾಡ ಹಗಲೇ ಇಬ್ಬರೂ ರೌಡಿಶೀಟರ್ ಗಳ ಮೇಲೆ ಪುಡಿ ರೌಡಿಗಳು ಮಚ್ಚಿನಿಂದ ಹಾಗೂ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದ ಘಟನೆ ಮೈಸೂರು ರಸ್ತೆಯ ಚನ್ನರಾಯಪಟ್ಟಣದ ಕಾಳೇನಹಳ್ಳಿ ಗೇಟ್ ಬಳಿ ನಡೆದಿದೆ.
ಹೌದು ಚನ್ನರಾಯಪಟ್ಟಣ ಕಾಳೆನಹಳ್ಳಿ ಗೇಟ್ ಬಳಿಯ ಡಾಬಾ ಒಂದರಲ್ಲಿ ಈ ಒಂದು ಹಲ್ಲೆ ನಡೆಸಲಾಗಿದ್ದು, ಹಾಸನದಲ್ಲಿ ರೌಡಿಶೀಟರ್ ಗಳಿಗೆ ಮಚ್ಚಿನಿಂದ ಪುಡಿ ರೌಡಿಗಳು ಹಲ್ಲೆ ನಡೆಸಿದ್ದಾರೆ.
ಹಲ್ಲೆಗೆ ಒಳಗದಂತಹ ರೌಡಿಶೀಟರ್ ಗಳನ್ನು ಕಾಳೆನಹಳ್ಳಿಯ ಕಾರ್ತಿಕ್ ಮತ್ತು ಪುನೀತ್ ಎಂದು ತಿಳಿದುಬಂದಿದೆ. ಘಟನೆ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.