Oplus_16908288
ಕಲಬುರ್ಗಿ : ಕಲ್ಬುರ್ಗಿಯಲ್ಲಿ ಭೀಕರವಾದ ಕೊಲೆಯಾಗಿದ್ದು ಆಸ್ತಿಯ ವಿಚಾರವಾಗಿ ಅಳಿಯಂದರಿಬ್ಬರೂ ಸೇರಿ ಅತ್ತೆಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನ ಬಂದರವಾಡ್ ಗ್ರಾಮದ ನಿವಾಸಿ ಲಕ್ಕಮ್ಮ (40) ಎಂದು ಗುರುತಿಸಲಾಗಿದೆ.ಮನೆ ಕಟ್ಟುವ ವಿಚಾರದಲ್ಲಿ ಈ ಹಿಂದೆ ಕುಟುಂಬದಲ್ಲೇ ಜಗಳವಾಗಿತ್ತು.
ಅದೇ ಹಳೆಯ ವೈಶಮ್ಯದಿಂದಾಗಿ ಈಗ ಮಹಿಳೆಯ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.
ಸದ್ಯ ಕೊಲೆ ಆರೋಪಿಗಳಾದ ಸಂತೋಷ್ (35) ಮಂಜುನಾಥ್ (25) ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಫಜಲಪುರ ವೃತ್ತ ನಿರೀಕ್ಷಕ ಚನ್ನಯ್ಯ ಅವರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ದುರು ಶ್ರೀನಿವಾಸಲು ಸೇರಿದಂತೆ ಮತ್ತಿತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[…] […]