ಗ್ಯಾಸ್ಟ್ರಿಕ್  ವೋ.. ಅಥವಾ ಹೃದಯಾಘಾತವೋ.. ಗುರುತಿಸುವುದು ಹೇಗೆ?

ಎದೆಯಲ್ಲಿ ತೀವ್ರ ಅಥವಾ ಹಠಾತ್ ನೋವು ಕಾಣಿಸಿಕೊಂಡರೆ ಅದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಇರಬಹುದು ಅಥವಾ ಹೃದಯಾಘಾತದ ಸಂಕೇತವಾಗಿರಬಹುದು. ಗ್ಯಾಸ್ಟ್ರಿಕ್‌ನಿಂದ ಉಂಟಾಗುವ ನೋವು ಸಾಮಾನ್ಯವಾಗಿ ಹೊಟ್ಟೆ ಉಬ್ಬುವಿಕೆ, ಗಾಳಿ ಚಲಿಸುವ ಅನುಭವ, ಎದೆಯಲ್ಲಿ ಸಣ್ಣ ಚುಚ್ಚುವ ನೋವುಗಳೊಂದಿಗೆ ಇರುತ್ತದೆ. ಆದರೆ ಹೃದಯ ಸಂಬಂಧಿತ ತೊಂದರೆಗಳು ಎದೆಯ ಮಧ್ಯದಲ್ಲಿ ತೀವ್ರ ನೋವು, ನೋವು ಭುಜ, ಬೆನ್ನು ಅಥವಾ ಕುತ್ತಿಗೆಗೆ ಹರಡುವುದು, ಉಸಿರಾಟದ ತೊಂದರೆ, ಅತಿಯಾದ ಬೆವರು, ತಲೆತಿರುಗಿಕೆ ಮುಂತಾದ ತೀವ್ರ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತವೆ. ಈ ವಿಭಜನೆ ತಿಳಿದುಕೊಳ್ಳುವುದು ಪ್ರಾಣಪಾಯವನ್ನು ತಪ್ಪಿಸಲು ಅತ್ಯಗತ್ಯ.