
ಶುಭ ಮುಂಜಾನೆಯ ಶುಭ ಸಂದೇಶವಾಗಲಿ, ಶುಭ ರಾತ್ರಿ ಸಂದೇಶವಾಗಲಿ ಇಲ್ಲವೇ ಪ್ರೇಮ ನಿವೇದನೆ ಆಗಲಿ ಸರ್ವವೂ ಸರ್ವಕ್ಕೂ ಆಧಾರವಾಗಿರುವ ವಾಟ್ಸಪ್ ಎಂಬ ಮಾಯಾ ಲೋಕ ನಮ್ಮ ನಿಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂಥಹ ವಾಟ್ಸಪ್ ಅಕೌಂಟ್ ಹ್ಯಾಕ್ ಅಥವಾ ಬ್ಲಾಕ್ ಆಗಿದಿಯೇ. ಹಾಗಾದರೆ ಇಲ್ಲಿರುವ ಸಿಂಪಲ್ ಸ್ಟೆಪ್ಸ್ ಫಾಲೋ ಮಾಡಿ ನಿಮ್ಮ WhatsApp ಅಕೌಂಟ್ ಅನ್ನು ಈ ರೀತಿ ಅನ್ ಬ್ಲಾಕ್ ಮಾಡಿ.
ಸ್ಟೆಪ್. 1
=> ಮೊದಲು ನಿಮ್ಮ ಆಯ್ಕೆಯ ಬ್ರೌಸರ್ ಅನ್ನು ತೆರೆಯಿರಿ.
=> ವಾಟ್ಸಾಪ್ ಗ್ರಿವಿಯನ್ಸ್ ಫಾರ್ಮ್ ಎಂದು ಹುಡುಕಿ
=> ಬ್ರೌಸರ್ ಅಲ್ಲಿ ಬರುವ ಲಿಂಕ್ ಅನ್ನು ತೆರೆಯಿರಿ
ಸ್ಟೆಪ್. 2
=> ನೀವು ಕಾನೂನು ವಿನಂತಿಯನ್ನು ಸಲ್ಲಿಸುವ ಕಾನೂನು ಜಾರಿ ಅಧಿಕಾರಿಯೇ? ಎಂಬ ಪ್ರಶ್ನೆಗೆ ನೋ ಎಂಬ ಆಯ್ಕೆ ಮಾಡಿಕೊಳ್ಳಿ.
ಸ್ಟೆಪ್. 3
=> ನಿಮ್ಮ ಹ್ಯಾಕ್ ಆಗಿರುವ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ.
ಸ್ಟೆಪ್.4
=> ನನ್ನ ಅಕೌಂಟ್ ಹ್ಯಾಕ್ ಆಗಿದೆ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ
ಸ್ಟೆಪ್.5
=> ನಿಮ್ಮ ಅಕೌಂಟ್ ಹ್ಯಾಕ್ ಆಗಿರುವ ಬಗ್ಗೆ ಹಾಗೂ ಇನ್ನಿತರ ಅಹವಾಲುಗಳನ್ನು ನಮೂದಿಸಿ.
ಸ್ಟೆಪ್.6
=> ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅಥವಾ ಆಧಾರ್ ಕಾರ್ಡ್ ಅನ್ನು ಅಪ್ಲೋಡ್ ಮಾಡಿ.
ಸ್ಟೆಪ್.7
=> ನೀವು ಲಾಯರ್ ಅಥವಾ ಕಾನೂನು ಅಧಿಕಾರಿಯೇ ಹಾಗೂ ನೀವು ನಿಮ್ಮ ಕ್ಲೈಂಟ್ ಪರವಾಗಿ ಮನವಿ ಸಲ್ಲಿಸುತ್ತಿರುವಿರ ಎಂಬ ಆಯ್ಕೆಗೆ ನೋ ಎಂಬ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ.
ಸ್ಟೆಪ್.8
=> ನಿಮ್ಮ ಪೂರ್ತಿ ಹೆಸರು ಹಾಗೂ ಇಮೇಲ್ ವಿಳಾಸವನ್ನು ನಮೂದಿಸಿ.
ಸ್ಟೆಪ್.9
=> ನೀವು ಕೊಟ್ಟಿರುವ ಎಲ್ಲಾ ಮಾಹಿತಿ ಸರಿ ಇದೆ ಎಂದು ಖಚಿತ ಪಡಿಸಿಕೊಂಡು =>ಎಸ್ ಎಂಬ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ ಹಾಗೂ ಎಲೆಕ್ಟ್ರಾನಿಕ್ ಸಿಗ್ನೇಚರ್ ವಿಭಾಗದಲ್ಲಿ ನಿಮ್ಮ ಮೊದಲ ಹಾಗೂ ಕೊನೆಯ ಹೆಸರನ್ನು ನಮೂದಿಸಿ.
ಮತ್ತು ಫಾರ್ಮ್ ಅನ್ನು ಕಳುಹಿಸಿ…….
ಈ ಎಲ್ಲಾ ಹಂತಗಳು ಮುಗಿದ ನಂತರ, ಕನಿಷ್ಠ 24 ಗಂಟೆಯೊಳಗೆ ಅಥವಾ 48 ಗಂಟೆಯೊಳಗೆ ನಿಮ್ಮ ವಾಟ್ಸಾಪ್ ರಿಕವರ್ ಆಗುವುದು.