ಕನಕದಾಸ
~~~~~~~~~~
1. ಕನಕದಾಸರ ಗುರುಗಳು
1)ಶ್ರೀವ್ಯಾಸರಾಯರು. 2)ಪುರಂದರದಾಸರು. 3)ವಾದಿರಾಜರು
2. ಕನಕದಾಸರು ಜನಿಸಿದ ಊರು
1)ಶಿಗ್ಗಾಂವಿ. 2)ಹಾವೇರಿ. 3)ಬಾಡ
3. ಕನಕದಾಸರ ತಂದೆಯ ಹೆಸರು
1)ತಿಮ್ಮಪ್ಪನಾಯಕ. 2)ಬೀರಪ್ಪನಾಯಕ. 3)ಸೂರಪ್ಪನಾಯಕ
4. ಕನಕದಾಸರ ತಾಯಿಯ ಹೆಸರು
1)ಲಕ್ಷ್ಮಮ್ಮ. 2)ತಿಮ್ಮಮ್ಮ. 3)ಬಚ್ಚಮ್ಮ
5. ಕನಕದಾಸರ ಅಂಕಿತ ನಾಮ
1)ಚೆನ್ನಮಲ್ಲಿಕಾರ್ಜುನ. 2)ಕಾಗಿನೆಲೆ ಆದಿಕೇಶವ. 3)ಪುರಂದರ ವಿಠಲ
6. ‘ಕನಕನ ಕಿಂಡಿ’ ಇರುವ ಕರ್ನಾಟಕದ ಹೆಸರಾಂತ ಸುಕ್ಷೇತ್ರ
1)ಉಡುಪಿ. 2)ಗೋಕರ್ಣ. 3)ಶೃಂಗೇರಿ
7. ಕನಕದಾಸರ ಮೂಲ ಹೆಸರು
1)ಭೀಮಪ್ಪ. 2)ರಾಮಪ್ಪ. 3)ತಿಮ್ಮಪ್ಪ
8. ಕನಕದಾಸರ ‘ರಾಮಧಾನ್ಯ ಚರಿತೆ’ ಕೃತಿಯು ರಚಿತವಾಗಿರುವ ಪ್ರಕಾರ
1)ಶರ ಷಟ್ಪದಿ. 2)ಭಾಮಿನಿ ಷಟ್ಪದಿ. 3)ವಾರ್ಧಕ ಷಟ್ಪದಿ
9. ಕನಕದಾಸರು ರಚಿಸಿದ ಒಟ್ಟು ಕೀರ್ತನೆಗಳ ಸಂಖ್ಯೆ
1) 316 2) 390 3) 212
10. ಡಾ.ರಾಜ್ ಕುಮಾರ್ ಅಭಿನಯದ “ಭಕ್ತ ಕನಕದಾಸ” ಚಲನಚಿತ್ರವು ತೆರೆಕಂಡ ವರ್ಷ
1) 1960 2) 1965 3)1956
11. ಕನಕದಾಸರ “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ…” ಕೀರ್ತನೆಯು ಇರುವ ಚಲನಚಿತ್ರ
1)ಬೇಡರ ಕಣ್ಣಪ್ಪ. 2)ಶಿವ ಮೆಚ್ಚಿದ ಕಣ್ಣಪ್ಪ. 3)ಹರಿಭಕ್ತ
12. ‘ರಾಗಿ’ ಯ ಶ್ರೇಷ್ಠತೆಯನ್ನು ಸಾರುವ ಕನಕದಾಸರ ಕೃತಿ
1)ರಾಮಧಾನ್ಯ ಚರಿತೆ. 2)ಮೋಹನ ತರಂಗಿಣಿ. 3)ನಳ ಚರಿತ್ರೆ
13. ಕನಕದಾಸರ ಸಮಕಾಲೀನ ಕೀರ್ತನಕಾರರು
1)ಶ್ರೀವಾದಿರಾಜರು. 2)ಮುತ್ತುಸ್ವಾಮಿ ದೀಕ್ಷಿತರು. 3)ಪುರಂದರದಾಸರು
14. ಉಡುಪಿಯ ಶ್ರೀಕೃಷ್ಣನ ದರ್ಶನಕ್ಕಾಗಿ ಕನಕದಾಸರು ಹಾಡಿದ ಕೀರ್ತನೆ
1)ದೀನ ನಾನು ಸಮಸ್ತ ಲೋಕಕೆ ದಾನಿ ನೀನು…
2)ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ…
3)ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ…
15. ಕನಕದಾಸರ “ತಲ್ಲಣಿಸದಿರು ಕಂಡ್ಯ ತಾಳು ಮನವೆ…” ಕೀರ್ತನೆ ಇರುವ ಶ್ರೀನಾಥ್ ಅಭಿನಯದ ಚಿತ್ರ
1)ಮೌನಗೀತೆ. 2)ಬಾಳೊಂದು ಭಾವಗೀತೆ. 3)ಧರ್ಮಸೆರೆ
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಶ್ರೀವ್ಯಾಸರಾಯರು 2)ಬಾಡ 3)ಬೀರಪ್ಪ ನಾಯಕ 4)ಬಚ್ಚಮ್ಮ 5)ಕಾಗಿನೆಲೆ ಆದಿಕೇಶವ 6)ಉಡುಪಿ 7)ತಿಮ್ಮಪ್ಪ 8)ಭಾಮಿನಿ ಷಟ್ಪದಿ 9) 316 10) 1960 11)ಶಿವ ಮೆಚ್ಚಿದ ಕಣ್ಣಪ್ಪ 12)ರಾಮಧಾನ್ಯ ಚರಿತೆ 13)ಪುರಂದರದಾಸರು 14)ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ 15)ಮೌನಗೀತೆ
*********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ( ಬಸವಣ್ಣ)

[…] ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ … […]
[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]