ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಕನಕದಾಸರು ಶಿಗ್ಗಾಂವಿಯ ಬಾಡ ಗ್ರಾಮದವರು. ಶ್ರೀವ್ಯಾಸರಾಯರು ಅವರ ಗುರುಗಳು. ಕಾಗಿನೆಲೆ ಆದಿಕೇಶವ ಎಂಬ ಅಂಕಿತನಾಮ ಹೊಂದಿದ ಅವರು ಉಡುಪಿಯ “ಕನಕನ ಕಿಂಡಿ” ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ಮಹಾನ್ ಭಕ್ತ. “ರಾಮಧಾನ್ಯ ಚರಿತೆ” ಕೃತಿಯಲ್ಲಿ ರಾಗಿ ಧಾನ್ಯದ ಮಹತ್ವವನ್ನು ವಿವರಿಸಿದ್ದಾರೆ. ಡಾ. ರಾಜ್ ಕುಮಾರ್ ಅಭಿನಯದ “ಭಕ್ತ ಕನಕದಾಸ” ಚಿತ್ರದ ಮೂಲಕ ಅವರ ಜೀವನ ಚಿತ್ರಿತವಾಗಿದೆ.