ನನ್ನಲ್ಲಿಗೆ ಒಬ್ಬರು ತನ್ನ ತಮ್ಮನನ್ನು ಮೂರು ತಿಂಗಳಿಂದ ಬೀಳುತ್ತಿದ್ದಾನೆ ಎನ್ನುವ ಕಾರಣಕ್ಕೆ ಕರೆದುಕೊಂಡು ಬಂದಿದ್ದರು. ಆತನ ವಯಸ್ಸು ಸುಮಾರು ಮೂವತ್ತು ವರ್ಷ. ಮದುವೆ ಆಗಿ ಆರು ತಿಂಗಳು ಕಳೆದಿವೆ. ಸಾಂಪ್ರದಾಯಸ್ಥ ಅವಿಭಕ್ತ ಕುಟುಂಬದಿಂದ ಬಂದ ಇವನು ಮೂರು ಗಂಡು ಮಕ್ಕಳ ಪೈಕಿ ಎರಡನೆಯವನು. ಆರ್ಥಿಕವಾಗಿ ಮಧ್ಯಮ ವರ್ಗಕ್ಕೆ ಸೇರಿದ್ದಾನೆ. ಓದಿದ್ದು ಎಂಟನೆ ತರಗತಿ. ಈತನ ಹೆಂಡತಿ ಸುಮಾರು ಇಪ್ಪತ್ತೈದು ವರ್ಷಗಳ ಪಿ ಯು ಸಿ ಓದಿದ ಐದು ಹೆಣ್ಣು ಮಕ್ಕಳ ಪೈಕಿ ಮೂರನೆಯವಳು.
ಆರ್ಥಿಕವಾಗಿ ಮತ್ತು ನೋಡಲು ಸುಮಾರಾಗಿದ್ದು ಮದುವೆ ಆದ ಎರಡು ತಿಂಗಳಿಂದ ಈಕೆ ಅವನಿಂದ ವಿಚ್ಛೇದನ ಕೇಳುತ್ತಿದ್ದಾಳೆ. ಆಕೆಯ ವರ್ತನೆ ಆ ಹುಡುಗನ ಮನೆಯವರಿಗೆ ನಿದ್ರೆ ಕೆಡಿಸಿದೆ. ಇದಕ್ಕೆ ತುಪ್ಪ ಸುರಿದಂತೆ ಅವನ ಬೀಳುವ ಸಮಸ್ಯೆ. ಈ ಸಮಸ್ಯೆ ಅಪಸ್ಮಾರ ಅಲ್ಲ. ಈ ವಿಷಯವನ್ನು ಅವರ ಮನೆಯವರ ಮುಂದೆ ಚರ್ಚಿಸಿದ ನಂತರ ಹೆಂಡತಿಯ ಹತ್ತಿರ ಮಾತನಾಡಿದಾಗ ಆಕೆ ಹೇಳಿದ್ದು “ಸರ್ ಇವನ ನಡುವಳಿಕೆ ಹೆಣ್ಣಿನ ತರ” ಎಂದಾಗ ನನ್ನ ಮೆಂಟಲ್ ಸ್ಟೇಟಸ್ ಪರೀಕ್ಷೆಯಲ್ಲಿ ಈ ಅಂಶವು ಆತನಲ್ಲಿ ಕಂಡು ಬಂದಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಅವನು ತನ್ನ ಸಮಸ್ಯೆ ಬಗ್ಗೆ ಶಬ್ದಶಃ ಹೀಗೆ ನುಡಿದಿದ್ದ “ತು ನನ್ದುಕೆ ಚರ್ಮ .. ಸರಿ ಇಲ್ಲ.. ತು ..ನನ್ದುಕೆ ಶರೀರ ಹಲೇದು ಆಗ್ಬುಟೈತೆ… ತು ..ಎಲ್ಲಾದಿಕ್ಕೆ ನನ್ನ ಮೈಂಡ್ ಸರಿ ಐತೆ.. ತು.. ನನ್ದುಕ್ಕೆ ಸುಸ್ತು ಐತಲ್ಲಾ … ಜೀವನಾನೆ ಬೇಡ..”
ಇವನು ಮಾತನಾಡುವ ಸಂದರ್ಭದಲ್ಲಿ ಹೆಂಡತಿಯು ಆಡಿಕೊಳ್ಳುವುದು ಹಾಗು ಆತನ ತಪ್ಪುಗಳನ್ನು ಕಂಡುಹಿಡಿದು ಈತನನ್ನು ಹಿಯ್ಯಾಳಿಸುವುದು. ಕೂತರು, ನಿಂತರು, ಹತ್ತಿರ ಬಂದರು ಅವಳಿಗೆ ಸರಿ ಆಗುತ್ತಿರಲಿಲ್ಲ. ಆತನಿಗೆ ಆತ್ಮ ಸಮಾಲೋಚನೆ ಮೂಲಕ ಹಾಗು ಔಷಧ ಉಪಚಾರದಿಂದ ಅವನು ಬಿಳುವುದು ನಿಂತಿತ್ತು. ಹೀಗೆ ಮೂರು ನಾಲ್ಕು ವರ್ಷಗಳ ಚಿಕಿತ್ಸೆ ಮಾಡಿದ ನಂತರ ಆತನ ಸಮಸ್ಯೆ ಬಹುತೇಕ ಕಮ್ಮಿ ಆಗಿತ್ತು. ಆಕೆ ಗರ್ಭಿಣಿ ಸಹ ಆಗಿದ್ದಳು. ಮತ್ತೆ ನನ್ನ ಹತ್ತಿರ ಚಿಕಿತ್ಸೆಗೆಂದು ಬರಲಿಲ್ಲ. ಈಗ ಸರಿ ಆಗಿರಬಹುದು ಎಂಬ ಆಶಾಭಾವನೆ ನನ್ನದಾಗಿದೆ.

ಯಾರು ಯಾವತ್ತು ತನ್ನ ಆತ್ಮವನ್ನೇ ಪ್ರೀತಿಸುವುದಿಲ್ಲವೋ ಅಂದು ಆತ ಅಥವ ಆಕೆ ಕಿನ್ನತೆಗೆ ಹೋಗುವುದು ಸಹಜ. ನಾವು ನಮ್ಮ ಶರೀರದ ಜೊತೆ ಎಂದು ಸ್ನೇಹದಿಂದ ವರ್ತಿಸುತ್ತೇವೋ ಆಗ ನಮಗೆ ಆನಂದ ಇಲ್ಲದೇ ಇದ್ದರೂ ತೃಪ್ತಿಯಂತು ನಿಶ್ಚಿತ. ಈಗಿನ ಜನರ ಪ್ರವೃತ್ತಿ ಚಿತ್ರ ನಟರಂತೆ ಅಥವ ನಟಿಯರಂತೆ ಇರಬೇಕು ಮತ್ತು ಸಾಕಷ್ಟು ಹಣ ಅಲಾಂಕಾರ ಸಾಮಾಗ್ರಿಗಳಿಗೆ ಖರ್ಚು ಮಾಡಬೇಕು. ಈ ಕಾರಣಕ್ಕೆ ಅಧಿಕವಾಗಿ ಹಣ ಸಂಪಾದನೆ ಮಾಡಬೇಕು ಮತ್ತು ತರತರಹ ಒತ್ತಡಗಳಿಗೆ ಒಳಗಾಗಬೇಕು.
ಎಲಾನ್ ಮಸ್ಕರ “ನ್ಯೂರೋ ಲಿಂಕ್ಸ” ವತಿಯಿಂದ ದೊಡ್ಡ ದೊಡ್ಡ ಸಂಶೋಧನೆಗಳು ನೆಡೆಯುತ್ತಿವೆ. ಈ ಸಂಶೋಧನೆಗಳಿಂದ ನವ ಯೌವನ ಮತ್ತು ನವ ಚೇತನ ಪಡೆಯುವುದು. ಇದೊಂದೇ ಈ ಕಂಪನಿಯ ಕೆಲಸವಲ್ಲ. ಸುಮಾರು ಮೂರು ವರ್ಷಗಳಿಂದ ಮನಸ್ಸು ಮತ್ತು ಸಿಲಿಕಾನ್ ಚಿಪ್ ಜೊತೆ ಅಂತರ ಸಂಪರ್ಕ ಸಾಧನೆಯನ್ನು ತಯಾರು ಮಾಡುತ್ತಿದ್ದಾರೆ. ಇದರಿಂದ ಮನಸ್ಸನ್ನು ಅರಿಯುವ ಸಾಧನೆ ಮತ್ತು ಒಬ್ಬರಿಂದ ಮತ್ತೊಬ್ಬರ ಜೊತೆ ದೂರಭಾವ ಸ್ಪಂದನೆ ಸಾಧಿಸಬಹುದು ಎಂದು ಹೇಳಲಾಗಿದೆ.

“ಬೆತ್ತಲೆ ಸ್ನೇಹಿತೆ.. ಬರಿ ಮೈ ಅಸಹ್ಯಕರ.. ಹೊದಿಕೆ ಒಳಿತು.. ನಗ್ನತೆ ಸತ್ಯ”
ಪ್ರಸ್ತುತ ಯಾಂತ್ರಿಕ ಬದುಕಿನಲ್ಲಿ ಸ್ನೇಹಿತರು ಜಾಲತಾಣಗಳಲ್ಲಿ ನೆಲೆಸಿರುವರು. ಜನರ ಪ್ರಾಣ ಮೊಬೈಲ್ ಫೋನ್ಗಳಲ್ಲಿ ಇವೆ. ಇವರು ಮಾಡಿದ ರೀಲ್ಸ, ವಿಡಿಯೋ ಮತ್ತು ಇನ್ಸ್ಟಾಗ್ರಾಂ ಗಳಿಗೆ ಅಂತರ್ಜಾಲದಲ್ಲೆ ಶುಭಾಶಯಗಳು ಮತ್ತು ಲೈಕ್ಗಳು. ನಮ್ಮ ನಿಜವಾದ ಸಮಸ್ಯೆಗಳಿಗೆ “ವಿಶ್ ಯು ಸ್ಪೀಡೀ ರಿಕವರಿ”, ಡೋಂಟ್ ಲೂಸ್ ಹೋಪ್ಸ, ಹ್ಯಾವ್ ಕರೇಜ್” ಹೀಗೆ ಸಾಂತ್ವನಗಳು.
ಕೆಲವೊಮ್ಮೆ ಧನ ಸಹಾಯ ಮಾಡಬಹುದು ಆದರೆ ಭಾವಾತ್ಮಕ ಆಲಿಂಗನಗಳು ಇರುವುದಿಲ್ಲ. ಮನುಷ್ಯರು ಮನುಷ್ಯನನ್ನು ಹಗ್ ಮಾಡುವುದೇ ಇಲ್ಲ. ವಿಪರ್ಯಾಸ ಅಂದರೆ ಸಾಕಿದ ನಾಯಿ ಅಥವ ಬೆಕ್ಕು ಎಷ್ಟು ಅದೃಷ್ಟ ಮಾಡಿದ್ದಾವೋ.
ಮನುಜನಿಗೆ ಮಾನವನೇ ಸಿಗದಿದ್ದಾಗ ಈ ಮನುಷ್ಯ ಯಾರನ್ನು ಪ್ರೀತಿಸ ಬೇಕು? ಮಾನವ “ನನಗೆ ನನ್ನ ಆತ್ಮವೇ ಸ್ನೇಹಿತ (ನಾರ್ಸಿಸಂ ಅಲ್ಲ)” ಎಂಬುದರ ಬಗ್ಗೆ ಯೋಚನೆ ಮಾಡಬೇಕು. ತನ್ನನ್ನು ತಾನು ಪ್ರೀತಿಸದಿದ್ದರೆ ಇನ್ನು ಯಾರು ಇವನನ್ನು ಪ್ರೀತಿಸ ಬೇಕು? ಆತ್ಮವಿಶ್ವಾಸ ಇಲ್ಲದೇ ಇರುವುವನಿಗೆ ಆತ್ಮಹತ್ಯೆ ವಿಚಾರಗಳು ಸಹಜ. ಆತ್ಮ ಭರವಸೆ ಇಲ್ಲದವನಿಗೆ ನಿರುತ್ಸಾಹವೇ ಮನೆ. ನಂಬಿಕೆಗಳು ಬರಿದಾದರೆ ಅವನಿಗೆ ಆತ್ಮಹತ್ಯೆ ಒಂದೇ ಉಳಿದಿರುವ ದಾರಿ.
ತಂತ್ರದ ಮೂಲ ತತ್ವ “ಮಾನವನು ನಂಬಿಕೆಯ ಗೂಡನ್ನು ತನ್ನಲ್ಲೇ ಕಟ್ಟಿಕೊಳ್ಳಬೇಕು, ಕಟ್ಟಿದ ಗೂಡಲ್ಲಿ ಪ್ರತಿ ನಿತ್ಯ ಸೇರ ಬೇಕು, ಸೇರಿದಾಗ ಭಾವಾ ಮತ್ತು ವಿಚಾರಾತ್ಮಗಳು ಸ್ನೇಹಿತರಂತೆ ಇರಬೇಕು. ಅಹಂಗಳು ಇರಬಾರದು”.

ನಿಮ್ಮಲ್ಲಿ ಒಮ್ಮೊಮ್ಮೆ ಮನೆಯ ಮಂದಿಯನ್ನು ಅಕಾಸ್ಮಾತ್ ಬರಿ ಮೈಯಲ್ಲಿ ನೋಡುವಂತಹ ಸಂದರ್ಭ ಬಂದಿರಬಹುದು. ಇಂತಹ ಸಂದರ್ಭ ಬಂದಾಗ ನಾವು ವಿಚಲಿತರಾಗಿ ಕ್ಷಣಕಾಲ ಕಣ್ಣು ಮುಚ್ಚುತ್ತೇವೆ. ಯಾರೂ ಕಣ್ಣು ಮಿಟುಕಿಸುವುದಿಲ್ಲ. ಅಂತಹ ಸನ್ನಿವೇಶದಲ್ಲಿ ಕಣ್ಣಿನ ರೆಪ್ಪೆ ತನ್ನಷ್ಟಕ್ಕೆ ತಾನೆ ಮುಚ್ಚಿ ಆ ಜಾಗದಿಂದ ಪಲಾಯನ ಮಾಡುತ್ತೇವೆ. ಈ ಸಮಯದಲ್ಲಿ ಯಾವುದೇ ಕಾಮ ಭಾವ ಇರುವುದಿಲ್ಲ. ಬಂದರೆ ಅವನಲ್ಲಿ ವಿಕೃತ ಭಾವನೆ ಇದೆ ಎಂದರ್ಥ. ತಂತ್ರ ಸೂತ್ರ ಅನುಗುಣವಾಗಿ ಸಂಸಾರದ ಪಾವಿತ್ರತೆ ಇದ್ದಾಗ ಮಾತ್ರ ಬರಿ ಮೈ ಅಸಹ್ಯ ಎಂದೆನ್ನುಸುವುದಿಲ್ಲ.
ಮೈ ಯಾವಾಗ ಆಕರ್ಷಿಸುತ್ತದೆ? ಮೈ ಮುಚ್ಚಿದಾಗ ಮಾತ್ರ. ನನಗೆ ಅರ್ಥವಾಗದ ವಿಷಯ ಎಂದರೆ ನಟ ನಟಿಯರ ವರ್ತನೆಗಳು. ನಟರನ್ನು ನೋಡಿದರೆ ಸೂಟು ಬೂಟು. ಆದರೆ ನಟಿಯರು, ತುಂಡು ಉಡುಗೆಯ ಲಲನೆಯರು. ನಟಿಯರ ವರ್ತನೆಯನ್ನು ಪ್ರಶ್ನೆ ಮಾಡಿದರೆ ನೋಡುಗರ ಕಣ್ಣು ಸರಿ ಇರಬೇಕು ಎನ್ನುವ ವಾದ. ನಮ್ಮ ದೇಶದಲ್ಲಿ ಆರಿಸಲ್ಪಟ್ಟ ಪ್ರತಿನಿಧಿಗಳು, ಅತ್ಯಾಚಾರದ ಕಾರಣ ಹುಡುಗಿಯರ ಆಕರ್ಷಿಸುವ ತಂಡು ಉಡಿಗೆ ಎಂದು ಹೇಳಿಕೆ ಕೊಟ್ಟಾಗ ಮಹಿಳಾಮಣಿಗಳ ಕಂಗೆಣ್ಣಿಗೆ ಗುರಿ ಆಗುತ್ತಾರೆ.
ತಂತ್ರ ಗ್ರಂಥಗಳಲ್ಲಿ ಕಾಮೋದ್ರೇಕ, ಪವಿತ್ರ ಸಂಸಾರದ ಬಂಧನದ ನಾಲ್ಕು ಗೋಡೆಯ ಮಧ್ಯದಲ್ಲಿ ಇರಬೇಕು. ಇದ್ದರೆ ಮಾತ್ರ ಕುಲೋತ್ತಮ್ಮ ವೃದ್ಧಿಗೆ ಸಹಕಾರಿ ಆಗುತ್ತದೆ.
ತಂತ್ರ ವಿಜ್ಞಾನದಲ್ಲಿ ನಗ್ನತೆ ಎಂಬುದು ಸತ್ಯ. ಮಗು ಹುಟ್ಟುವಾಗ ಬೆತ್ತಲೆ. ಮಗು ಮುಗ್ಧತೆಯ ಸಂಕೇತ. ಬುದ್ಧನ ಬೋಧನೆಯಲ್ಲಿ ನಗ್ನತೆಯು ಸತ್ಯದ ಅನಾವರಣ. ಜೈನ ಧರ್ಮದಲ್ಲಿನ ದಿಗಂಬರತೆ ಸತ್ಯ ಮಾರ್ಗದ ರೂಪ ಅಥವ “ನಗ್ನತೆ”. ವಿಪರ್ಯಾಸ ಎಂದರೆ ಸತ್ಯ ಹೇಳುವರು ಯಾರು ಇಲ್ಲ. ಇಂದು ಸತ್ಯ ಹೇಳಿದವರು ಯಾರೂ ನಮ್ಮೊಂದಿಗೆ ಇಲ್ಲ.
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

