ನನ್ನ ವೈದ್ಯಕೀಯ ಕಾಲೇಜಿನ ಸ್ನೇಹಿತನೂಬ್ಬನ ಹೆಸರು “ರಾಮಸ್ವಾಮಿ”. ಎಲ್ಲರು ಆತನನ್ನು ಕಾಮಸ್ವಾಮಿ ಎಂದು ಕರೆಯುತ್ತಿದ್ದರು. ಕಾಲೇಜಿನ ಹೆಂಗಳೆಯರನ್ನು ನೋಡಿದಾಗಲೆಲ್ಲಾ ಮದುವೆ ಆಗುವ ಬಯಕೆ ಇಡುತ್ತಿದ್ದ. ಒಳ್ಳೆಯ ಸ್ನೇಹಿತ, ವಿಕೃತ ಮನಸ್ಸಿನವನಲ್ಲ. ಅತಿಯಾದ ವಿಚಿತ್ರ ಬೇಡಿಕೆ ಇವನದಾಗಿತ್ತು. ಹೆಂಗಳೆಯರು ಈತನನ್ನು ನೋಡಿ ಅವನ ಅಸಹಾಯಕ ಸ್ಥಿತಿಗೆ ಮರುಗುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಆದರೆ ಒಂದು ಸಾರಿ “ಒನ್ ವೆ ಟಿಕೆಟ್” ಇದ್ದಂತೆ, ಸುಂದರವಾಗಿದ್ದ ವಿದ್ಯಾರ್ಥಿನಿಯ ಮನೆಗೆ ಹೋಗಿ ಆಕೆಯ ತಾಯಿ ಮುಂದೆ ತನ್ನ ಬಯಕೆಯ ಪ್ರಸ್ತಾವನೆ ಇಟ್ಟಾಗ ಆ ವಿದ್ಯಾರ್ಥಿನಿ ತಾಯಿಯ ರೌದ್ರ ಅವತಾರಕ್ಕೆ ಎದ್ದನೋ ಬಿದ್ದನೊ ಎಂಬಂತೆ ಅವರಿಂದ ತಪ್ಪಿಸಿಕೊಂಡ.
ತಂತ್ರಾನುಸಾರ ಪ್ರೇಮ ಎಂಬುದು ಪವಿತ್ರ ಗಂಡು ಹೆಣ್ಣಿನ ಅನುಭೂತಿ. ಮನಸ್ಸುಗಳ ಮಿಲನ. ಈ ಕ್ರೀಯೆ ಗಂಡು ಹೆಣ್ಣು ನೋಡಿದ ತಕ್ಷಣ ಆಗುವ ಕೆಲಸವಲ್ಲ. ಬಾಗು ಮತ್ತು ತಿದ್ದುಕೊ, ಇವರೆಡು ಉತ್ತಮಗೊಳಿಸುವ ಸಲಕರಣೆಗಳು ಮತ್ತು ಪವಿತ್ರ ಬಾಂಧವ್ಯ ಎನ್ನುವ ಯಂತ್ರದ ಅಂಗಾಗಳು. ಸೌಂದರ್ಯ ಲೆಕ್ಕಕ್ಕೆ ಬರುವುದಿಲ್ಲ. ಬರುವುದು ಮನಸ್ಸಿನ ಬಂಧನಗಳ ಮನೋಧರ್ಮ.

ಕಾಲೇಜಿನ ಸಹಪಾಠಿಗಳು ನಲವತ್ತು ವರ್ಷಗಳ ನಂತರ ಬೇಟಿ ಆದಾಗ “ಹೇ ನೀನು ಮದುವೆ ಆಗಿಲ್ಲವೇ?” ಅಂದಾಗ “ಸರ್ಚಿಂಗ್ ಫಾರ್ ಎ ಪರಫೆಕ್ಟ್ ಪಾರ್ಟ್ನರ್” ಎಂದ. ಅವನು ಆಕೆಯನ್ನು ವಿಚಾರಿಸಿದಾಗ ಅದೇ ಉತ್ತರ. ಮೂವತೈದು ವರ್ಷಗಳು ದಾಟಿದ ಸ್ನೇಹಿತನಿಗೆ “ಮದುವೆ ಆಗುವುದಿಲ್ಲವೇನೋ?” ಎಂದು ಕೇಳಿದಾಗ “ಇಲ್ಲಮ್ಮ, ಮದುವೆ ಆಗುವಳು ಜಯಪ್ರದ ತರಹ ಇರಬೇಕು” ಅಂದಿದ್ದ. ಆದರೆ ಆತನಿಗೆ ಸಿಕ್ಕಿದ್ದು ಹಲ್ಲುಬ್ಬಿ. ನಾನು ಯಾವುದೇ ದುರುದ್ದೇಶ ಇಟ್ಟುಕೊಂಡು ನನ್ನ ಅನುಭವ ತಿಳಿಸುತ್ತಿಲ್ಲ ಆದರೆ ನನ್ನ ಉದ್ದೇಶ ಮದುವೆ ಎಂಬುದು ಹೊಂದಾಣಿಕೆ, ಮನಸ್ಸಿನ ಬೆಸುಗೆ ಮತ್ತು ಸರಿ ಜೋಡಿ ಅಷ್ಟೆ.
“ಶಿವ” ಅಸಾಮಾನ್ಯ ಶೈಲಿಯಲ್ಲಿ ನಮ್ಮನೆಲ್ಲಾ ವಿನ್ಯಾಸಗೊಳಿಸಿದ್ದಾನೆ. ವಿನ್ಯಾಸಗೊಂಡಿರುವ ನಮ್ಮ ಮೆದುಳಿಗೆ ನಾಲ್ಕು ದೈನಂದಿನ ಜೀವನಕ್ಕೆ ಬರುವಂತಹ ಉಪಕರಣಗಳನ್ನು ಜೋಡಿಸಿದ್ದಾನೆ. ಆ ಸಲಕರಣೆಗಳು “ಇಚ್ಚೆ, ಯೋಚನೆ, ಭಾವ ಮತ್ತು ಕಾರ್ಯ”. ಈ ನಾಲ್ಕು ಇನ್ಸಟ್ರುಮೆಂಟ್ಸ್ ಸಮಂಜಸವಾಗಿ ಮತ್ತು ಸಮಾನಾಂತರವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದರೆ ಮನಸ್ಸಿನ ಅಸಮತೋಲನ ಆಗಬಹುದು. ನಾನು ಮೇಲೆ ಪ್ರಸ್ತಾಪಿಸಿದ ಉದಾಹರಣೆಗಳು ತಾರ್ಕಿಕವಾಗಿ ನೋಡುವುದಾದರೆ ಮೆದುಳಿನ ಒಂದು ಸಲಕರಣೆ “ಇಚ್ಚೆ” ಈ ಸ್ನೇಹಿತನಲ್ಲಿ ಪ್ರಬಲವಾಗಿದೆ ಎಂದೆನ್ನಸುತ್ತೆ. ಆದುದರಿಂದ ಯಾವುದೇ ಸಲಕರಣೆಗಳ ಕೆಲಸ ಅತಿಯಾಗಿ ಮುಂದಾದರೆ ಮಾನಸಿಕ ಸಮಸ್ಯೆಗಳು ಎದುರಾಗುವುದು.

ಉದಾಹರಣೆಗೆ, ಯೋಚನೆ ಜಾಸ್ತಿ ಆದರೆ ವಿನಾಕಾರಣ “ಭಯ ಮತ್ತು ಚಿಂತೆ” ಬರಬಹುದು. ಭಾವ ಮುಂದಾದಾಗ “ಖಿನ್ನತೆ” ಶುರು ಆಗಬಹುದು. ಕಾರ್ಯ ಹೆಚ್ಚಾದಾಗ ಅತಿಯಾದ “ಚೂಟಿತನ ಅಥವ ಅತಿಯಾದ ಚಟುವಟಿಕೆ (ಮೇನಿಯಾ)” ಕಾಣಬಹುದು. ಇವೇಲ್ಲದರ ಸಂಯೋಜನೆ ಮತ್ತು ಸಹಕಾರ ಮೆದುಳಿನ ರಚನೆ ಮತ್ತು ನರ ಕಣಗಳ ಉತ್ಪತ್ತಿ ಆಗುವುದರ ಮೇಲೆ ನಿಂತಿರುತ್ತವೆ.
ಇದನ್ನು ಓದಿ: ಹಾಸನಾಂಬ ನೈಜ ದರ್ಶನ ಅನಾವರಣ! 🌸 ಭಕ್ತರ ಪ್ರಾರ್ಥನೆ ಸ್ವೀಕಾರ!
ಒಂದು ಕಾಲ್ಪನಿಕ ಸಂದಿಗ್ಧ ಸ್ಥಿತಿಯನ್ನು ಅವಲೋಕಿಸೋಣ. ಮಾನವ ಎಂದೆಂದಿಗೂ ಸಂಚಲನ ಶೀಲ ಜೀವಿ. ಮಾನವನ ಶರೀರದ ಚಿಹ್ನೆ ಮತ್ತು ಲಕ್ಷಣಗಳ ಮೇಲೆ ಮನಸ್ಸಿನ ಸ್ಥಿತಿಯನ್ನು ಅರಿಯಬಹುದಾಗಿದೆ. ಉದಾಹರಣೆಗೆ, ಯಾವಾಗ ಶರೀರ ಕಾರ್ಯಗಳ ಲಕ್ಷಣ ಕುಂಠಿತ ಆಗುತ್ತದೆಯೋ ಆಗ ಖಿನ್ನತೆ ಆವರಿಸಬಹುದೇನೊ ಎಂಬ ಅನುಮಾನ ಬರಬಹುದು. ಆದರೆ ಮನಸ್ಸಿನ ಇಚ್ಛೆ ಅರಿಯಲು ಬಹಳ ಕಷ್ಟ. ನಮ್ಮ ಕಾನೂನಿನ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದರೆ ಅವನು ನ್ಯಾಯಾಂಗ ದಂಡಕ್ಕೆ ಅರ್ಹ. ಈಗ ಮನಸ್ಸಿನ ಒಳಗೆ ಮಾನವನ ಪಾತ್ರ ಇದೆ ಎನ್ನುವುದಾದರೆ ಅವನ ಇಚ್ಛೆಯ ಅನುಸಾರ ಕೆಟ್ಟ ಕಾಮುಕ ಭಾವನೆ ಮಹಿಳೆಯ ಮೇಲೆ ಬಂದಾಗ ಅವನನ್ನು ದಂಡಿಸಲು ಯಾವ ಶಾಸನಬದ್ಧ ದಂಡವಿದೆ? ಹೀಗಿದ್ದಾಗ ನಮ್ಮ ಆತ್ಮಸಾಕ್ಷಿ ನ್ಯಾಯಾಂಗ ವ್ಯವಸ್ಥೆಯೇ?

“ತಂತ್ರ” ಯೋಗಾನುಸಾರ “ಆತ್ಮಸಾಕ್ಷಿ” ಒಂದು ಮಹತ್ವದ ಅಥವ ಪ್ರಮುಖವಾದ ಉಪಕರಣ. ಈ ಉಪಕರಣದ ನಿರ್ವಹಣೆಯು ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಬರುವಂತಾದ್ದು. ಆದರೆ ಈ ಆತ್ಮಸಾಕ್ಷಿಯನ್ನು ಮಾದಕದ್ರವ್ಯ, ಅನೀತಿ ಮತ್ತು ಅನೈತಿಕತೆಯಿಂದ ಮುಚ್ಚಬಹುದು. ಮುಚ್ಚಿದಾಗ ಆ ವ್ಯಕ್ತಿಯು ಮೃಗ ಆಗುವುದರಲ್ಲಿ ಸಂಶಯ ಇಲ್ಲ. ಇಂದು ನಮ್ಮ ಸಮಾಜದಲ್ಲಿ ತಲೆ ತಗ್ಗಿಸುವಂತ ಹೀನಾಯ ಕೃತ್ಯಗಳು ಆಗುತ್ತಿರುವುದು ಇದರಿಂದಲೆ, ನಿಜವಾಗಿಲು ಶೋಚನೀಯ. ಹದಿಹರೆಯದ ಹೆಣ್ಣುಮಕ್ಕಳ ಮುಗ್ಧತೆಯನ್ನು ವಿಕೃತದಿಂದ ಮೆರೆದವರನ್ನು ಯಾವ ಪಾಪ ಕೂಪಕ್ಕೆ ತಳ್ಳಬೇಕು?

ದುರದೃಷ್ಟಕರವೆಂದರೆ ನಮ್ಮ ಸಮಾಜದಲ್ಲಿ ಮುಕ್ತವಾಗಿ ಮಾದಕದ್ರವ್ಯಗಳ ದಂಧೆ ನೆಡೆಯುತ್ತಿದೆ. ಅಂತರ್ಜಲ ನಿಯಂತ್ರಣವನ್ನು ತರಲು ಸಹ ಆಗುತ್ತಿಲ್ಲ. ದೃಶ್ಯಮಾಧ್ಯಮಗಳಲ್ಲಿ ತರ ತರಹದ ಪ್ರಚೋದನೆ ನೀಡುವ ರೀಲ್ಸಗಳು ಯುವ ಮನಸ್ಸುಗಳಿಗೆ ಲಗ್ಗೆ ಇಡುತ್ತಿವೆ. ಹಲವಾರು ರಾಷ್ಟ್ರಗಳಲ್ಲಿ ವೈಶ್ಯವಾಟಿಕೆಯನ್ನು ಕಾನೂನಿನ ತಿದ್ದುಪಡಿಗೆ ತಂದರೂ ಮಾನಭಂಗ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು, ಹತ್ಯೆಗಳು ಇತ್ಯಾದಿ ನಿಂತಿಲ್ಲ. ಜಾಲತಾಣಗಳಲ್ಲಿ ಅಶ್ಲೀಲ ಚಿತ್ರ ಮತ್ತು ದೃಶ್ಯ ಮಾಧ್ಯಮಗಳ ಕ್ಲಿಪ್ ನಿಯಂತ್ರಣ ಮಾಡಿದರೂ ಹೆಂಗಸರ ಮೇಲೆ ದೌರ್ಜನ್ಯ ನಿಲ್ಲುವುದಿಲ್ಲ. ವಿಪರ್ಯಾಸವೆಂದರೆ ಪ್ರಸ್ತುತದಲ್ಲಿ ಅವಕಾಶಗಳ ಅವಾಂತರಗಳಿಂದ ಕಂಡು ಕೇಳರಿಯದ ಹೀನಾಯ ಕೃತ್ಯಗಳು ನೆಡೆಯುತ್ತಿವೆ.
ಇದನ್ನು ಓದಿ: “ ಸಾಕ್ರೆಟೀಸ್ – ಸಿದ್ದಾರ್ಥ ಮುಕರ್ಜಿಯ – ಶ್ರೀ ಕೃಷ್ಣ ಪರಮಾತ್ಮ – ಶಿವ ಭಕ್ತ”
ತಂತ್ರದ ಮೂಲ ತತ್ವ “ಮುಕ್ತ”. ಮುಕ್ತದ ಅರ್ಥ ಮುಕ್ತಿ ಅಲ್ಲ. ಹೇಳಬೇಕು ಅಂದರೆ ಮುಕ್ತಿ ಪಡೆಯಲು ಜನ್ಮ ಜನ್ಮಗಳೇ ಬೇಕಾಗುವುದು. “ಮುಕ್ತ” ದ ಅರ್ಥ ಮೆದುಳಿನ ಒಂದು ಸಲಕರಣೆ. ಈ ಯಂತ್ರದ ಕೆಲಸ ಸಹ ಪ್ರೇಮ, ಸಹ ಭಾಗತ್ವ, ಸಹ ಬಾಳ್ವೆ ಮತ್ತು ಸಹ ಭಾವ. ಈ ಯಂತ್ರವನ್ನು ನಾವು ವೃದ್ಧಿಸಬೇಕಾದರೆ ದೂರ ದೃಷ್ಟಿ ಇರಬೇಕು ಮತ್ತು ನಮ್ಮ ಆತ್ಮಸಾಕ್ಷಿಯನ್ನು ಬಲ ಪಡಿಸಬೇಕು. ಬುದ್ದಿ, ವಿವೇಕ ಮತ್ತು ಜ್ಞಾನದಿಂದ ಸಾಕ್ಷಾತ್ಕಾರ ಹೊಂದಬೇಕು. ಹೊಂದಿದ್ದೇ ಆದರೆ ಅಪರಾಧಗಳನ್ನು ಬಹುಪಾಲು ನಿಯಂತ್ರಣದಲ್ಲಿ ತರಬಹುದು…
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] […]