ಹುಬ್ಬಳ್ಳಿ: ಸ್ಕೋಡಾ ಆಟೋ ಇಂಡಿಯಾ ತನ್ನ ಅದ್ಭುತ ಆಕ್ಟೇವಿಯಾ ಆರ್.ಎಸ್.ಅನ್ನು ಮತ್ತೆ ಬಿಡುಗಡೆ ಮಾಡುತ್ತಿದ್ದು, ಡ್ರೈವಿಂಗ್ ಉತ್ಸಾಹಿಗಳಿಗೆ ಹೊಸ ಸಂಭ್ರಮವನ್ನು ಮೂಡಿಸಿದೆ. ಹೊಚ್ಚ ಹೊಸ ಆಕ್ಟೇವಿಯಾ ಆರ್.ಎಸ್. ಪ್ರೀ ಬುಕಿಂಗ್ ಅಕ್ಟೋಬರ್ 6, 2025 ರಿಂದ ಆರಂಭವಾಗಲಿದ್ದು, ಸ್ಕೋಡಾ ಆಟೋದ ಅತ್ಯಂತ ಜನಪ್ರಿಯ ಪರ್ಫಾರ್ಮೆನ್ಸ್ ಸೆಡಾನ್ ಮತ್ತೆ ರಸ್ತೆಗಿಳಿಯಲು ಸನ್ನದ್ಧವಾಗಿದೆ. ಜಾಗತಿಕ ಐಕಾನ್ ಭಾರತದಲ್ಲಿ ಸಂಪೂರ್ಣ ನಿರ್ಮಿತ ಯುನಿಟ್ ರೂಪದಲ್ಲಿ ಸೀಮಿತ ಸಂಖ್ಯೆಯಲ್ಲಿ ಲಭ್ಯವಿರಲಿದೆ. ಈ ಬಿಡುಗಡೆಯ ಮೂಲಕ, ಹೋಲಿಕೆ ಇಲ್ಲದ ಡ್ರೈವಿಂಗ್ ಡೈನಾಮಿಕ್ಸ್, ಬೋಲ್ಡ್ ವಿನ್ಯಾಸ ಮತ್ತು ಅದ್ಭುತ ಉತ್ಸಾಹವನ್ನು ಒದಗಿಸಲು ಸ್ಕೋಡಾ ಆಟೋ ಸಿದ್ಧವಾಗಿದೆ.
ಆಕ್ಟೇವಿಯಾ ಆರ್.ಎಸ್. ಮರಳಿ ರಸ್ತೆಗಿಳಿಸುವ ಬಗ್ಗೆ ಮಾತನಾಡಿದ ಸ್ಕೋಡಾ ಆಟೋ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಆಶಿಶ್ ಗುಪ್ತಾ, “ಈ ವರ್ಷದ ಆರಂಭದಲ್ಲಿ ಜಾಗತಿಕ ಐಕಾನ್ ಅನ್ನು ಭಾರತದಲ್ಲಿ ಪರಿಚಯಿಸುತ್ತೇವೆ ಎಂಬ ಭರವಸೆಯನ್ನು ನಾವು ನೀಡಿದ್ದೆವು. ಇಂದು, ಆಕ್ಟೇವಿಯಾ ಆರ್.ಎಸ್.ನೊಂದಿಗೆ ಆ ಭರವಸೆಯನ್ನು ನಾವು ಪೂರ್ತಿಗೊಳಿಸಿದ್ದೇವೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಈ ಬ್ಯಾಡ್ಜ್ನಲ್ಲಿ ಹೋಲಿಕೆ ಇಲ್ಲದ ಪರಂಪರೆಯ ದ್ಯೋತಕವಿದೆ. ಕಳೆದ ಎರಡು ದಶಕಗಳಿಂದಲೂ ಇಡೀ ಜಗತ್ತಿನಲ್ಲಿ ವಾಹನ ಪ್ರೇಮಿಗಳಿಗೆ ಹೊಸ ಹುಮ್ಮಸ್ಸನ್ನು ಇದು ನೀಡಿದೆ. ಭಾರತದಲ್ಲಿ ಹೊಚ್ಚ ಹೊಸ ಆಕ್ಟೇವಿಯಾ ಆರ್.ಎಸ್. ಅನ್ನು ಬಿಡುಗಡೆ ಮಾಡುವ ಮೂಲಕ ನಾವು ಕಾರನ್ನು ಮರಳಿ ರಸ್ತೆಗೆ ಇಳಿಸುತ್ತಿರುವುದಷ್ಟೇ ಅಲ್ಲ. ಆ ಕಾರಿಗೆ ಹೊಂದಿಕೊಂಡ ಭಾವಗಳನ್ನೂ ಮತ್ತೆ ನೆನಪಿಸುತ್ತಿದ್ದೇವೆ. ಪರ್ಫಾರ್ಮೆನ್ಸ್, ಉತ್ಸಾಹ ಮತ್ತು ಡ್ರೈವಿಂಗ್ನ ಅಸಲಿ ಖುಷಿಗೆ ಹೊಸ ವ್ಯಾಖ್ಯಾನ ನೀಡುವ ದಂತಕಥೆ ಇದು.” ಎಂದು ವ್ಯಾಖ್ಯಾನಿಸಿದರು.
ವರದಿ : ಕೆ ಬಿ ಚಂದ್ರಚೂಡ್
