ಹುಬ್ಬಳ್ಳಿ: ಪ್ರತಿ ವರ್ಷವೂ ಗಣೇಶೋತ್ಸವದ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗುತ್ತಿದ್ದ ಈದ್ಗಾ ಮೈದಾನವನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆಯ ಉಪ ಮೇಯರ್ ಸಂತೋಷ್ ಚೌಹ್ವಾಣ್ ಅಧಿಕೃತವಾಗಿ ‘ರಾಣಿ ಚೆನ್ನಮ್ಮ ಮೈದಾನ’ ಎಂದು ಘೋಷಿಸಿದ್ದಾರೆ.
ಹುಬ್ಬಳ್ಳಿಯ ಈದ್ಗಾ ಮೈದಾನವು ಗಣೇಶ ಹಬ್ಬದ ವೇಳೆ ಯಾವಾಗಲೂ ವಿವಾದಕ್ಕೆ ಕಾರಣವಾಗುತ್ತಿತ್ತು. ಆದರೆ, ಈ ವರ್ಷದ ಗಣೇಶೋತ್ಸವ ಶಾಂತಿಯುತವಾಗಿ ನಡೆಯುತ್ತಿದೆ. ಮೈದಾನದ ಹೆಸರಿನ ಹಿಂದಿನ ವಿವಾದಕ್ಕೆ ಮೌಢ್ಯವನ್ನೂ ನಿವಾರಣೆ ಮಾಡಿದ್ದು, ಮಹಾನಗರ ಪಾಲಿಕೆಯು ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನವೆಂದು ಅಧಿಕೃತವಾಗಿ ಮರುನಾಮಕರಣ ಮಾಡಿದೆ.
ಈ ಘೋಷಣೆಯ ಬಳಿಕ ಹಿಂದೂ ಪರ ಸಂಘಟನೆಗಳು ಮತ್ತು ಗಜಾನನ ಉತ್ಸವ ಸಮಿತಿಯವರು ಸಂತೋಷ ವ್ಯಕ್ತಪಡಿಸಿದ್ದಾರೆ.
