ಬೆಂಗಳೂರು, ಜೂನ್ 21: ಮದುವೆಯ ನಂತರ ಪತ್ನಿಗೆ ಗಂಡನ ಜಾತಿಯ ಸ್ಥಾನಮಾನ ತಕ್ಷಣವೇ ವರ್ಗವಾಗುವುದಿಲ್ಲ, ವಿಶೇಷವಾಗಿ ಚುನಾವಣಾ ವಿಚಾರಗಳಲ್ಲಿ ಇಂತಹ ವರ್ಗಾವಣೆಗಳನ್ನು ಪರಿಗಣಿಸಲಾಗದು ಎಂಬ ಮಹತ್ವದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ನೀಡಿದೆ.
“ಅರ್ಚನಾ ಎಂ.ಜಿ. Vs ಶ್ರೀಮತಿ ಅಭಿಲಾಶ ಮತ್ತಿತರರು” ಎಂಬ ಪ್ರಕರಣದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ. ಮಹಾಭಾರತದ “ದೈವ ಯತ್ನಂ ಕುಲೇ ಜನ್ಮ… ಪುರುಷ ಯತ್ನಂ ಪೌರುಷಂ” ಎಂಬ ಶ್ಲೋಕವನ್ನು ಉಲ್ಲೇಖಿಸಿ, ಜಾತಿ ಮೂಲತಃ ತಂದೆಯಿಂದ ಮಕ್ಕಳಿಗೆ ಬರುವಂತೆ ಇರುತ್ತದೆ ಎಂಬ ತತ್ವವನ್ನು ನ್ಯಾಯಾಲಯ ಪುಷ್ಟಿಪಡಿಸಿದೆ.
ಅಪರೂಪದ ಸಂದರ್ಭಗಳಲ್ಲಿ ಮಾತ್ರ ಪತ್ನಿ ಗಂಡನ ಸಮುದಾಯಕ್ಕೆ ಸೇರಬಹುದು. ಆದರೆ, ಚುನಾವಣೆ ಸಂಬಂಧಿತ ಕಾನೂನು ವಿಚಾರಗಳಲ್ಲಿ ಈ ತತ್ವವು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಜ್ಯೋತಿ ಬಸು ವಿರುದ್ಧ ದೇಬಿ ಪ್ರಸಾದ್ ಘೋಷಲ್ (AIR 1982 SC 983) ಪ್ರಕರಣವನ್ನು ಉಲ್ಲೇಖಿಸಿ ಪ್ರತಿವಾದಿ ಪರ ವಕೀಲರು ತಮ್ಮ ವಾದ ಮಂಡಿಸಿದ್ದರು. ಈ ಸಂಬಂಧ ಅರ್ಚನಾ ಅವರು ತಮ್ಮೆದುರು ವಾದ ಮಂಡಿಸಲು ಅವಕಾಶ ನೀಡಿಲ್ಲವೆಂದು ದೂರಿದ್ದರೂ, ಅನೇಕ ಅವಕಾಶಗಳನ್ನು ನೀಡಲಾಗಿದ್ದರೂ ಅವರು ಹಾಜರಾಗಿಲ್ಲ ಎಂಬುದಾಗಿ ದಾಖಲೆಗಳು ಹೇಳುತ್ತಿವೆ ಎಂದು ನ್ಯಾಯಾಲಯ ವಿವರಿಸಿದೆ.
ನ್ಯಾಯಾಲಯ, “ಇದೊಂದು ಸಾದಾ ನ್ಯಾಯಕವಲ್ಲದ, ಜನಪ್ರತಿನಿಧಿಯ ವಿರುದ್ಧದ ವಿಚಾರವಾಗಿದೆ” ಎಂದು ಉಲ್ಲೇಖಿಸಿ, ಉನ್ನತ ನೈತಿಕ ಪ್ರಮಾಣವನ್ನು ಪಾಲಿಸಬೇಕೆಂಬ ಸೂಚನೆಯನ್ನು ನೀಡಿದೆ.
ಕಾರ್ಮಿಕರ ಕೆಲಸದ ಅವಧಿ ಹೆಚ್ಚಳಕ್ಕೆ ಯಾವುದೇ ಅನುಮತಿ ನೀಡಿಲ್ಲ: ಸಚಿವ ಸಂತೋಷ್ ಲಾಡ್

[…] […]