“ಮದುವೆಯೇ ಜಾತಿ ಬದಲಾವಣೆಗೆ ಆಧಾರವಲ್ಲ: ಕರ್ನಾಟಕ ಹೈಕೋರ್ಟ್ ಕಠಿಣ ತೀರ್ಪು”

ಮದುವೆಯ ನಂತರ ಪತ್ನಿಗೆ ಗಂಡನ ಜಾತಿಯು ಸ್ವಯಂಚಾಲಿತವಾಗಿ ವರ್ಗವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಅರ್ಚನಾ ಎಂ.ಜಿ. Vs ಶ್ರೀಮತಿ ಅಭಿಲಾಶ ಮತ್ತಿತರರು” ಪ್ರಕರಣದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಚುನಾವಣಾ ವಿಚಾರಗಳಲ್ಲಿ ಇಂತಹ ವರ್ಗಾವಣೆಯನ್ನು ಪರಿಗಣಿಸಲಾಗದು ಎಂದು ತಿಳಿಸಿದ್ದಾರೆ. “ದೈವ ಯತ್ನಂ ಕುಲೇ ಜನ್ಮ…” ಎಂಬ ಮಹಾಭಾರತದ ಶ್ಲೋಕವನ್ನು ಉಲ್ಲೇಖಿಸಿ, ಸಾಮಾನ್ಯವಾಗಿ ಜಾತಿ ತಂದೆಯಿಂದ ಮಕ್ಕಳಿಗೆ ಬರುತ್ತದೆ ಎಂದು ವಿವರಿಸಲಾಗಿದೆ. ಅರ್ಚನಾ ಅವರಿಗೆ ವಾದಿಸಲು ಹಲವು ಅವಕಾಶಗಳಿದ್ದರೂ ಅವರು ಹಾಜರಾಗದ ಕಾರಣ ನ್ಯಾಯಾಲಯ ಉದಾರತೆ ತೋರಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.