ಹೈಬ್ರಿಡ್ ತೆಂಗಿನಸಸಿ – ಹೆಚ್ಚು ಇಳುವರಿ, ಕಡಿಮೆ ಸಮಯದಲ್ಲಿ ಫಲ- ಇಲ್ಲಿದೆ ಸಂಪೂರ್ಣ ಮಾಹಿತಿ

ಹೈಬ್ರಿಡ್ ತೆಂಗಿನಕಾಯಿಗಳು ಎರಡು ವಿಭಿನ್ನ ತೆಂಗಿನ ತಳಿಗಳ ಸಂಕರದಿಂದ ಹುಟ್ಟಿದವು. ಇವುಗಳಲ್ಲಿ ಹೆಚ್ಚಿನ ಇಳುವರಿ, ಬೇಗನೆ ಫಲ ನೀಡುವಿಕೆ, ಮತ್ತು ರೋಗ ನಿರೋಧಕತೆಯಂತಹ ಅತ್ಯುತ್ತಮ ಗುಣಲಕ್ಷಣಗಳು ಕಾಣಸಿಗುತ್ತವೆ. ಉದಾಹರಣೆಗೆ, TXD ಅಥವಾ COD x WCT ತಳಿಗಳು ವರ್ಷಕ್ಕೆ 200-300 ಕಾಯಿ ಇಳುವರಿ ನೀಡಬಲ್ಲದು. ಹೈಬ್ರಿಡ್ ಮರಗಳು ಮೂರುರಿಂದ ನಾಲ್ಕು ವರ್ಷಗಳೊಳಗೆ ಫಲ ನೀಡಲು ಪ್ರಾರಂಭಿಸುತ್ತವೆ. ಉತ್ತಮ ನಿರ್ವಹಣೆ, ನಿಯಮಿತ ನೀರಾವರಿ, ಗೊಬ್ಬರದ ಸರಿಯಾದ ಬಳಕೆ ಮತ್ತು ಕೀಟ-ರೋಗ ನಿಯಂತ್ರಣ ಕ್ರಮಗಳ ಮೂಲಕ ಉತ್ತಮ ಬೆಳವಣಿಗೆ ಸಾಧ್ಯ