
– ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಿಖರ್ ಧವನ್ ಅವರನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ರಾಯಭಾರಿಯಾಗಿ ಅಯ್ಕೆ ಮಾಡಲಾಗಿದೆ.
– ಫೆ. 19ರಿಂದ 9ರವರೆಗೆ ಟೂರ್ನಿಯು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ.
– ಟೂರ್ನಿಯಲ್ಲಿ ವಿಶ್ವಶ್ರೇಷ್ಠ ಎಂಟು ತಂಡಗಳು ಸ್ಪರ್ಧಿಸಲಿರುವ ಪ್ರತಿಷ್ಠಿತ ಟೂರ್ನಿ ಇದಾಗಿದೆ. ಶಿಖರ್ ಅವರಲ್ಲದೇ 2017ರ ಚಾಂಪಿಯನ್ ಪಾಕಿಸ್ತಾನ ತಂಡದ ನಾಯಕರಾಗಿದ್ದ ಸರ್ಫರಾಜ್ ಅಹಮದ್, ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವಾಟ್ಸನ್ ಮತ್ತು ನ್ಯೂಜಿಲೆಂಡ್ ತಂಡದ ವೇಗಿ ಟಿಮ್ ಸೌಥಿ ಅವರನ್ನೂ ನೇಮಕ ಮಾಡಲಾಗಿದೆ
🍃 ದಾಖಲೆ ಶಿಖರ್ :-
– ಚಾಂಪಿಯನ್ಸ್ ಟ್ರೋಫಿಯ ಎರಡು ಆವೃತ್ತಿಗಳಲ್ಲಿ 701 ರನ್ ಗಳಿಸಿರುವ ದಾಖಲೆ
– ಸತತವಾಗಿ ಎರಡು ಬಾರಿ ಚಿನ್ನದ ಬ್ಯಾಟ್ ಗೌರವಕ್ಕೂ ಪಾತ್ರರಾಗಿದ್ದರು
– 2013ರ ಟೂರ್ನಿಯಲ್ಲಿ ಅವರು ಸರ್ವಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದರು
– ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿಯೇ ಅತಿ ಹೆಚ್ಚು ಶತಕಗಳನ್ನು ಹೊಡೆದ ಶ್ರೇಯ ಅವರದ್ದು