ಭೋಪಾಲ್(ಮಾ.19): ಮಧ್ಯಪ್ರದೇಶದ ಗುನಾ ಜಿಲ್ಲಾ ಆಸ್ಪತ್ರೆಯಲ್ಲಿ ಯಾರನ್ನಾದರೂ ನಡುಗಿಸುವ ಘಟನೆ ಬೆಳಕಿಗೆ ಬಂದಿದೆ. ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇಡೀ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಾಸ್ತವವಾಗಿ, 20 ವರ್ಷದ ಜಾನ್ರನ್ನು ವೈದ್ಯರು ಸರಿಯಾದ ಪರೀಕ್ಷೆಯಿಲ್ಲದೆ ಸತ್ತಿದ್ದಾರೆಂದು ಘೋಷಿಸಿದರು ಮತ್ತು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಆದರೆ ಶವಾಗಾರದಲ್ಲಿ ಊಹಿಸಲಾಗದ ಘಟನೆ ಸಂಭವಿಸಿದಾಗ ಈ ಪ್ರಕರಣಕ್ಕೆ ನಿಜವಾದ ತಿರುವು ಸಿಕ್ಕಿದೆ.
ಶವಾಗಾರದಲ್ಲಿ ಯುವಕನಿಗೆ ಬಂತು ಜೀವ
ಯುವಕನನ್ನು ಮರಣೋತ್ತರ ಪರೀಕ್ಷೆಗೆ ಇರಿಸಿದ್ದರು. ಇದಾದ ಸ್ವಲ್ಪ ಸಮಯದ ನಂತರ ಅವನ ದೇಹದಲ್ಲಿ ಚಲವಲನ ಉಂಟಾಗಿದೆ. ಆದರೆ ಇದಾದ ಬಳಿಕ ಸಂಪೂರ್ಣವಾಗಿ ಪ್ರಜ್ಞೆ ಬಂದಾಗ ತನ್ನ ಸುತ್ತಮುತ್ತಲಿನ ದೃಶ್ಯ ಕಂಡು ಭಯಭೀತನಾಗಿ ಶವಾಗಾರದಿಂದ ಬೆತ್ತಲೆಯಾಗಿ ಹೊರಗೆ ಓಡಿಹೋದ.
ಅತ್ತ ಈ ಸ್ಥಿತಿಯಲ್ಲಿ ಅವನನ್ನು ನೋಡಿದ ಆಸ್ಪತ್ರೆಯಲ್ಲಿದ್ದವರೂ ಭಯಭೀತ ಸ್ಥಿತಿಯಲ್ಲಿದ್ದರು. ಈ ಘಟನೆ ರೋಗಿಗಳು, ಸಂಬಂಧಿಕರು ಮತ್ತು ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ. ಸತ್ತಿದ್ದಾನೆಂದು ಎಂದು ಘೋಷಿಸಲ್ಪಟ್ಟ ವ್ಯಕ್ತಿ ಹೇಗೆ ಮತ್ತೆ ಜೀವಂತವಾದ ಎಂಬುವುದೇ ಈ ಭಯಕ್ಕೆ ಕಾರಣವಾಗಿತ್ತು.
ಮಾನಸಿಕ ಒತ್ತಡದಲ್ಲಿರುವ ಯುವಕ
ವರದಿಗಳ ಪ್ರಕಾರ, ಹುಜ್ಮಿಲ್ ಪ್ರದೇಶದ ನಿವಾಸಿ ಜಾನ್ ಪಾರ್ಟಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು. ಇದರ ಪರಿಣಾಮವಾಗಿ ಮಾರ್ಚ್ 11 ರಂದು, ಅವರು ವಿಷಕಾರಿ ವಸ್ತುವನ್ನು ಸೇವಿಸಿದ್ದಾರೆ. ನಂತರ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಯಿತು, ಅಲ್ಲಿ ವೈದ್ಯರು ಆತುರದಿಂದ ಸರಿಯಾಗಿ ಪರೀಕ್ಷೆ ನಡೆಸದೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಸಂಪೂರ್ಣ ಟೆಸ್ಟ್ ಮಾಡದೆಯೇ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಸಂತ್ರಸ್ತನಿಂದ ಗಂಭಿರ ಆರೋಪ
ಯುವಕ ಪ್ರಜ್ಞೆ ಮರಳಿದ ನಂತರ ಆತ ಬಹಿರಂಗಪಡಿಸಿದ ವಿಷಯ ಇನ್ನೂ ಭಯಾನಕವಾಗಿತ್ತು. ತನಗೆ ಸಕಾಲದಲ್ಲಿ ಪ್ರಜ್ಞೆ ಮರಳಿಲ್ಲದಿದ್ದರೆ, ವೈದ್ಯರು ತನ್ನನ್ನು ಜೀವಂತವಾಗಿ ಇರಿಯುತ್ತಿದ್ದರು ಎಂದು ಅವನು ಹೇಳಿದ್ದಾನೆ. ಅವನ ಹೇಳಿಕೆಯು ಈಗ ಸಾಮಾಜಿಕ ಮಾಧ್ಯಮ ಮತ್ತು ಸಾರ್ವಜನಿಕರಲ್ಲಿ ವೇಗವಾಗಿ ಹರಡುತ್ತಿದ್ದು, ಆರೋಗ್ಯ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಸಾರ್ವಜನಿಕರ ಕೋಪ, ಆಡಳಿತದ ವಿರುದ್ಧ ಪ್ರಶ್ನೆ
ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ. ತಪ್ಪಿತಸ್ಥ ವೈದ್ಯರು ಮತ್ತು ಆಸ್ಪತ್ರೆ ಆಡಳಿತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಆಸ್ಪತ್ರೆ ಆಡಳಿತವು ಇನ್ನೂ ಸ್ಪಷ್ಟ ಉತ್ತರವನ್ನು ನೀಡಿಲ್ಲ, ಇದು ಸಾರ್ವಜನಿಕರ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ.
