ಬೆಂಗಳೂರು, ಅ.08: ರಾಜ್ಯದ 15 ಜಿಲ್ಲೆಗಳ 27 ತಾಲೂಕುಗಳಲ್ಲಿನ ಅಂತರ್ಜಲ ಅತಿಬಳಕೆಯ ಪಟ್ಟಿಯಲ್ಲಿರುವ 252 ಗ್ರಾಮ ಪಂಚಾಯಿತಿಗಳಲ್ಲಿ ‘ನೀರಿದ್ದರೆ ನಾಳೆ’ ಯೋಜನೆಯನ್ನು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಈ ಯೋಜನೆಯ ಉದ್ದೇಶ — ಅತಿಯಾದ ಬಾವಿ ಮತ್ತು ಭೂಗರ್ಭಜಲ ಶೋಷಣೆಯಿಂದ ಉಂಟಾಗುತ್ತಿರುವ ನೀರಿನ ಕೊರತೆಯನ್ನು ನಿಯಂತ್ರಿಸುವುದು ಮತ್ತು ಶಾಶ್ವತ ನೀರಿನ ನಿರ್ವಹಣಾ ಮಾದರಿಯನ್ನು ಸ್ಥಾಪಿಸುವುದಾಗಿದೆ.
ಇದನ್ನು ಓದು: ಮುಂಬೈನಲ್ಲಿ ಗ್ಲೋಬಲ್ ಫಿನ್ಟೆಕ್ ಫೆಸ್ಟ್ ಆರಂಭ — ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟನೆ
ಯೋಜನೆಯಡಿ ಭೂಗರ್ಭಜಲ ಮಟ್ಟದ ನಿಗಾವಳಿ, ಮಳೆಯ ನೀರಿನ ಸಂಗ್ರಹಣೆ, ಸಮೂಹ ಬಾವಿಗಳ ಪುನಶ್ಚೇತನ, ಹಾಗೂ ಜಲಜಾಗೃತಿ ಅಭಿಯಾನಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತದೆ.
ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ರಾಜ್ಯದ ಇತರೆ ಅತಿಬಾಧಿತ ಪ್ರದೇಶಗಳಲ್ಲಿಯೂ ಮುಂದಿನ ಹಂತಗಳಲ್ಲಿ ವಿಸ್ತರಿಸುವ ಸರ್ಕಾರದ ಉದ್ದೇಶವಿದೆ.

[…] ರಾಜ್ಯದಲ್ಲಿ 252 ಗ್ರಾಮ ಪಂಚಾಯಿತಿಗಳಲ್ಲಿ ‘ನ… […]