ಹಾಸನದಲ್ಲಿ- ಕಾರ್ಮಿಕ ಸಂಘಟನೆಗಳ ಮುಷ್ಕರ – ಕೇಂದ್ರದ ಕಾರ್ಮಿಕ ನೀತಿಗೆ ವಿರೋಧ

ಹಾಸನದಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಮತ್ತು ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳ ಜಾರಿಗೆ ವಿರೋಧ ವ್ಯಕ್ತಪಡಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಮುಷ್ಕರ ನಡೆಯಿತು. ಸಿಐಟಿಯು, ಎಐಟಿಯುಸಿ ಸೇರಿದಂತೆ ವಿವಿಧ ಸಂಘಟನೆಗಳು ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿ, ಎನ್.ಆರ್. ವೃತ್ತದಲ್ಲಿ ಮಾನವ ಸರಪಣಿ ರೂಪಿಸಿ, ರಸ್ತೆ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡವು. ಸಂಘಟಕರು ಕಾರ್ಮಿಕರಿಗೆ 600 ರೂ. ದೈನಂದಿನ ವೇತನ, 26-36 ಸಾವಿರ ಕನಿಷ್ಠ ವೇತನ, ಹಳೆಯ ಪೆನ್‌ಷನ್ ಪುನಃಸ್ಥಾಪನೆ, ನೂತನ ಶಿಕ್ಷಣ ನೀತಿ ರದ್ದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟರು.