ಕೆ ಆರ್ ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿ ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕುರುಬಹಳ್ಳಿ ಹಾಗೂ ಪೂವನಹಳ್ಳಿ ಗ್ರಾಮದಲ್ಲಿ ದಿನಸಿ ಉಪ ಕೇಂದ್ರವನ್ನು ಕ್ಷೇತ್ರದ ಜನಪ್ರಿಯ ಶಾಸಕ ಹೆಚ್ ಟಿ ಮಂಜು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ತಾಲ್ಲೂಕು ಬೂಕನಕೆರೆ ಹೋಬಳಿ ಗಂಜಿಗೆರೆ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ವಕೀಲರಾದ ಕುರುಬಹಳ್ಳಿ ನಾಗೇಶ್ ಆಯ್ಕೆಯಾದ ನಂತರ ಕುರುಬಹಳ್ಳಿ ಹಾಗೂ ಪೂವನಹಳ್ಳಿ ಗ್ರಾಮದ ಜನರ ಹಿತದೃಷ್ಟಿಯಿಂದ ದಿನಸಿ ಉಪ ಕೇಂದ್ರವನ್ನು ತೆರೆಯುವ ಮೂಲಕ ಬಹಳ ದಿನಗಳಿಂದ ಜನರು ಇಟ್ಟುಕೊಂಡಿದ್ದ ಆಸೆಯನ್ನು ನೆರವೇರಿಸುವ ಕಾರ್ಯವನ್ನು ನೆನಸನ್ನಾಗಿ ಮಾಡಿದರು.
ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ಟಿ ಮಂಜು ಬಹಳ ವರ್ಷಗಳಿಂದ ಈ ಎರಡೂ ಗ್ರಾಮಗಳ ಜನರು ಮಳೆ,ಚಳಿ,ಗಾಳಿ ಎನ್ನದೇ ದೂರದ ಊರಾದ ಗಂಜಿಗೆರೆ ಗ್ರಾಮಕ್ಕೆ ಆಗಮಿಸಿ ಸೊಸೈಟಿಯಲ್ಲಿ ನೀಡುವ ಅಕ್ಕಿ,ಸೀಮೆಎಣ್ಣೆ, ಗೋಧಿ, ರಾಗಿ ತೆಗೆದುಕೊಂಡು ಹೋಗಿ ಬಹಳಷ್ಟು ಹಿಂಸೆಯಾಗುತ್ತಿತ್ತು.ಅನಂತರ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಮ್ಮ ಪಕ್ಷದ ಮುಖಂಡರು,ಸೊಸೈಟಿ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದು ಆಯ್ಕೆಯಾದ ನಾಗೇಶ್ ಅವರು ನಾನು ಶಾಸಕನಾದ ನಂತರ ಅನೇಕ ಬಾರಿ ನಮ್ಮ ಸೊಸೈಟಿ ವ್ಯಾಪ್ತಿಗೆ ಬರುವ ಈ ಎರಡು ಗ್ರಾಮಗಳಿಗೆ ಉಪ ಕೇಂದ್ರಗಳ ಅವಶ್ಯಕತೆ ಇದೆ ಎಂದು ಹಲವು ಬಾರಿ ಮಾಹಿತಿ ನೀಡಿದ್ದರು. ಇದಕ್ಕೆ ಸ್ಪಂದಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ತಾಲ್ಲೂಕು ದಂಡಾಧಿಕಾರಿ ಗಳ ಜೊತೆಗೆ ಚರ್ಚಿಸಿ ಕೊನೆಗೆ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಉಪಕೇಂದ್ರವನ್ನು ಸ್ಥಳೀಯ ಆಡಳಿತ ಮಂಡಳಿ,ಗ್ರಾಮದ ಮುಖಂಡರು ಜೊತೆಗೆ ಉದ್ಘಾಟಿಸಿದ್ದೇವೆ.ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಜನರಿಗೆ ಶಾಸಕರು ಸಲಹೆ ನೀಡಿದರು.

ಗಂಜಿಗೆರೆ ಸೊಸೈಟಿ ಅಧ್ಯಕ್ಷ ಕುರುಬಹಳ್ಳಿ ನಾಗೇಶ್ ಮಾತನಾಡಿ ಬಹು ವರ್ಷಗಳ ಆಸೆಯನ್ನು ನಮ್ಮ ನಾಯಕರು, ಕ್ಷೇತ್ರದ ಜನಪ್ರಿಯ ಶಾಸಕರು ಎರಡೂ ಗ್ರಾಮಗಳ ಆಸೆಯನ್ನು ಈಡೇರಿಸಿದ್ದಕ್ಕೆ ಹಾಗೂ ತಾಲ್ಲೂಕು ತಹಶಿಲ್ದಾರ್ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಮ್ಮ ಸೊಸೈಟಿಯ ಆಡಳಿತ ಮಂಡಳಿಯ ಪರವಾಗಿ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಶಾಸಕರು ಇದುವರೆಗೂ ನಾವು ಏನೇ ಕೇಳಿದರೂ ಇಲ್ಲ ಎಂಬುದನ್ನು ಉಚ್ಚರಿಸಿಲ್ಲ.ನಮ್ಮ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ದೇವಾಲಯಕ್ಕೆ ಹಾಗೂ ರಸ್ತೆ ಅಭಿವೃದ್ಧಿಗೆ 14ಲಕ್ಷರೂಗಳ ಅನುದಾನವನ್ನು ನೀಡಿದ್ದಾರೆ. ಇನ್ನೂ ಹತ್ತು ಹಲವು ಕಾಮಗಾರಿಗಳನ್ನು ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದ್ದರಿಂದ ಅವರಿಗೆ ಭಗವಂತನ ಇನ್ನೂ ಹೆಚ್ಚಿನ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಾಗೇಶ್ ತಿಳಿಸಿದರು.
ಕುರುಬಹಳ್ಳಿ ಹಾಗೂ ಪೂವನಹಳ್ಳಿ ಗ್ರಾಮದ ಜನರು ಮಳೆಯು ಸುರಿಯುತ್ತಿದ್ದರೂ ಲೆಕ್ಕಿಸದೆ ಶಾಸಕರಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ಅಶೋಕ್, ಜಿ.ಪಂ.ಮಾಜಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ,ಗ್ರಾಮ ಪಂಚಾಯತಿ ಅಧ್ಯಕ್ಷ ಮುದುಗೆರೆ ಪರಮೇಶ್,ಸುಧಾಶಿವರಾಜು,
ಪರಮೇಶ್,ಆನಂದ್, ಶಂಕರ್ ನಾಗ್, ರಾಮು,ನಂಜುಂಡಪ್ಪ,ಕಟ್ಟಹಳ್ಳಿ ಗಂಗಾಧರ್,ಮಾವಿನಕೆರೆ ಗಂಗಾಧರ್, ಜವರಪ್ಪ,ಜಯಮ್ಮ ದೇವೇಗೌಡ,ಡೇರಿ ಅಧ್ಯಕ್ಷ ರೀತಾಜಯರಾಂ,ರೀಟಾಶಿವಲೋಕೇಶ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಲೋಕೇಶ್,ಶಿವರಾಮ್,ಬೋರೇಗೌಡ,ದೇವೇಗೌಡ, ಡೇರಿ ಸ್ವಾಮಣ್ಣ,ಕೆ ಲೋಕೇಶ್, ನಿಂಗರಾಜು,ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಎಂ ಆರ್ ನಾಗೇಶ್, ಧನಂಜಯ್ ಇತರೆ ಗ್ರಾಮಸ್ಥರು ಹಾಜರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
